ಅಸ್ಸುಫ್ಫ ತರಗತಿ ಕೆ‌.ಸಿ.ಎಫ್.ನ ಕನಸಿನ ಯೋಜನೆ: ಸಿದ್ದೀಖ್ ಮೋಂಟುಗೋಳಿ

Update: 2017-10-03 06:35 GMT

ಒಮನ್, ಅ.3: ಕೆ.ಸಿ.ಎಫ್. ಸೊಹಾರ್ ಝೋನ್ ವತಿಯಿಂದ ಆಧ್ಯಾತ್ಮಿಕ ಮಜ್ಲಿಸ್ ಕಾರ್ಯಕರ್ಮ ಇಲ್ಲಿನ ಸೊಹಾರ್ ನಲ್ಲಿ ಇತ್ತೀಚೆಗೆ ನಡೆಯಿತು.

ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದ ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಹಾಗೂ ಕೆಸಿಎಫ್- ಐಎನ್ ಸಿ ನಾಯಕರೂ ಆದ ಕೆ.ಎಂ.ಸಿದ್ದೀಖ್ ಮೋಂಟುಗೋಳಿ ಮಾತನಾಡಿ, ಅಸ್ಸುಫ್ಫ ತರಗತಿ ಕೆ.ಸಿ.ಎಫ್.ನ ಕನಸಿನ ಯೋಜನೆಯಾಗಿದೆ. ಪ್ರಥಮ ಹಂತದ ಅಸ್ಸುಫ್ಫ ಬಹಳ ಯಶಸ್ವಿಯಾಗಿ ನಡೆದಿದೆ. ಎರಡನೆ ಹಂತದ ಅಸ್ಸುಫ್ಫ ತರಗತಿಯನ್ನು ಯಶಸ್ವಿಗೊಳಿಸುವಂತೆ ಕೆ.ಸಿ‌.ಎಫ್ ಸದಸ್ಯರಿಗೆ ಕರೆಯಿತ್ತರು.
ಕಾರ್ಯಕ್ರಮವನ್ನು ಕಾಸರಗೋಡು ಮುಸ್ಲಿಂ ಜಮಾಅತ್ ಅಧ್ಯಕ್ಷ ಸೈಯದ್ ಇಬ್ರಾಹಿಂ ಪೂಕುಂಞಿ ತಂಙಳ್ ಉದ್ಘಾಟಿಸಿದರು.

ಕೆ.ಸಿ.ಎಫ್. ಒಮನ್ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಆಬಿದ್ ತಂಙಳ್ ಪ್ರ. ಕಾರ್ಯದರ್ಶಿ ಹನೀಫ್ ಸಅದಿ, ಸಂಘಟನಾ ವಿಭಾಗದ ಸಂಚಾಲಕ ಕಲಂದರ್ ಬಾವ ಹಾಗೂ ಹಜ್ ಮತ್ತು ಉಮ್ರಾ ವಿಭಾಗದ ಅಧ್ಯಕ್ಷ ಗಪ್ಫಾರ್ ನಾವುಂದ ಉಪಸ್ಥಿತರಿದ್ದರು.

ಇದೇ ಸಂದರ್ಭ ಕರ್ನಾಟಕ ರಾಜ್ಯ ಹಜ್ ಕಮಿಟಿಯ ಸದಸ್ಯರಾಗಿ ಆಯ್ಕೆಯಾದ ಕೆ.ಎಂ.ಸಿದ್ದೀಖ್ ಮೋಂಟುಗೋಳಿಯವರನ್ನು‌ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕೆ.ಸಿ.ಎಫ್. ಒಮನ್ ರಾಷ್ಟ್ರೀಯ ಮೀಡಿಯಾ‌ ವಿಭಾಗದ ಸಂಚಾಲಕ ಸಿದ್ದೀಖ್ ಮಾಂಬಿಳಿ ಸುಳ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೆ.ಸಿ.ಎಫ್. ಸೊಹಾರ್ ಝೋನ್ ಪ್ರ. ಕಾರ್ಯದರ್ಶಿ ಅಶ್ರಫ್ ಕುತ್ತಾರ್  ನೆರೆವೇರಿಸಿದರು.
ಕೆ.ಸಿ.ಎಫ್. ಸೊಹಾರ್ ಝೋನ್ ಅಧ್ಯಕ್ಷ ಆರಿಫ್ ಮದಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News