ರೊಹಿಂಗ್ಯಾ ನಿರಾಶ್ರಿತರ ಸೇವೆಯಲ್ಲಿ ಕೆಎಸ್ ರಿಲೀಫ್

Update: 2017-10-03 17:22 GMT

ರಿಯಾದ್ (ಸೌದಿ ಅರೇಬಿಯ), ಅ. 3: ಬಾಂಗ್ಲಾದೇಶದ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿರುವ ರೊಹಿಂಗ್ಯ ಮುಸ್ಲಿಮರಿಗಾಗಿ ಆರೋಗ್ಯ ಯೋಜನೆಗಳನ್ನು ಜಾರಿಗೊಳಿಸಲು ದೊರೆ ಸಲ್ಮಾನ್ ಪರಿಹಾರ ಮತ್ತು ಮಾನವೀಯ ನೆರವು ಕೇಂದ್ರ (ಕೆಎಸ್‌ ರಿಲೀಫ್)ದ ತಂಡವೊಂದು ಬಾಂಗ್ಲಾದೇಶಕ್ಕೆ ಪ್ರಯಾಣಿಸಿದೆ.

ಕಾಕ್ಸ್ ಬಝಾರ್‌ನಲ್ಲಿರುವ ತಂಡವು ಅಂತಾರಾಷ್ಟ್ರೀಯ ವಲಸೆ ಸಂಘಟನೆ (ಐಒಎಂ) ಮತ್ತು ಬಾಂಗ್ಲಾದೇಶ ಸರಕಾರದೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News