ಜಿದ್ದಾ: ಪೆಟ್ರೋಲ್ ಬಾಂಬ್ ದಾಳಿಯಲ್ಲಿ ಇಬ್ಬರು ಅರಮನೆ ಕಾವಲುಗಾರರ ಸಾವು

Update: 2017-10-08 16:55 GMT

ಜಿದ್ದಾ (ಸೌದಿ ಅರೇಬಿಯ), ಅ. 8: ಸೌದಿ ಅರೇಬಿಯದ ಜಿದ್ದಾದಲ್ಲಿರುವ ಅಲ್-ಸಲಾಂ ಅರಮನೆಯ ಪಶ್ಚಿಮದ ದ್ವಾರದಲ್ಲಿರುವ ತನಿಖಾ ಠಾಣೆಯ ಮೇಲೆ ಶನಿವಾರ ಮುಂಜಾನೆ ಕಲಾಶ್ನಿಕೊವ್ ರೈಫಲ್ ಮತ್ತು ಮೂರು ಪೆಟ್ರೋಲ್ ಬಾಂಬ್‌ಗಳಿಂದ ದಾಳಿ ನಡೆಸಿದ ವ್ಯಕ್ತಿಯೋರ್ವ ಇಬ್ಬರು ರಾಯಲ್ ಗಾರ್ಡ್‌ಗಳನ್ನು ಹತ್ಯೆ ಮಾಡಿದ್ದಾನೆ ಹಾಗೂ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

ದಾಳಿಕೋರ 28 ವರ್ಷದ ಮನ್ಸೂರ್ ಬಿನ್ ಹಸನ್ ಅಲ್ ಅಮೇರಿ ಎಂಬಾತನನ್ನು ಭದ್ರತಾ ಪಡೆಗಳು ಸ್ಥಳದಲ್ಲೇ ಕೊಂದವು ಎಂದು ಆಂತರಿಕ ಸಚಿವಾಲಯದ ವಕ್ತಾರ ಮನ್ಸೂರ್ ಅಲ್ ತುರ್ಕಿ ತಿಳಿಸಿದರು.

ತನ್ನ ವಾಹನದಿಂದ ಹೊರಬಂದ ಬಂದೂಕುಧಾರಿ ಕಾವಲುಗಾರರತ್ತ ಗುಂಡು ಹಾರಿಸಲು ಆರಂಭಿಸಿದನು ಎಂದು ಅಲ್-ತುರ್ಕಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News