ರಿಯಾದ್ ಗವರ್ನರ್‌ರಿಂದ ಹಲವು ಶೈಕ್ಷಣಿಕ ಯೋಜನೆಗಳ ಘೋಷಣೆ

Update: 2017-10-08 16:59 GMT

ರಿಯಾದ್ (ಸೌದಿ ಅರೇಬಿಯ), ಅ. 8: ರಿಯಾದ್ ಗವರ್ನರ್ ರಾಜಕುಮಾರ ಫೈಸಲ್ ಬಿನ್ ಬಂದರ್ ಇತ್ತೀಚೆಗೆ 730 ಮಿಲಿಯ ಸೌದಿ ರಿಯಾಲ್ (ಸುಮಾರು 1,275 ಕೋಟಿ ರೂಪಾಯಿ)ಗೂ ಅಧಿಕ ವೆಚ್ಚದ ಹಲವಾರು ಶೈಕ್ಷಣಿಕ ಯೋಜನೆಗಳನ್ನು ಉದ್ಘಾಟಿಸಿದರು.

ಸೌದಿ ಅರೇಬಿಯದ 87ನೆ ರಾಷ್ಟ್ರೀಯ ದಿನದ ಸಂದರ್ಭದಲ್ಲಿ ಈ ಯೋಜನೆಗಳಿಗೆ ಚಾಲನೆ ನೀಡಲಾಗಿದೆ.

ನೂತನ ಯೋಜನೆಗಳಿಂದ ರಿಯಾದ್ ವಲಯದಲ್ಲಿನ 70 ಶಾಲೆಗಳು ಮತ್ತು 40,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತದೆ ಎಂದು ರಿಯಾದ್ ಗವರ್ನರ್ ಹೇಳಿದರು.

ತಮ್ಮ ಭವಿಷ್ಯವನ್ನು ರೂಪಿಸುವ ಶಿಕ್ಷಕರಿಗೆ ಜನರು ಗೌರವ ಸಲ್ಲಿಸಬೇಕು ಎಂದು ಅವರು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News