ಸೌದಿ ಅರೇಬಿಯದಿಂದ ಉನ್ನತ ಶಿಕ್ಷಣಕ್ಕೆ ಅಧಿಕ ವೆಚ್ಚ: ಕಾರ್ಮಿಕ ಸಚಿವ

Update: 2017-10-16 17:34 GMT

ರಿಯಾದ್, ಅ. 16: ಸೌದಿ ಅರೇಬಿಯವು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಒಇಸಿಡಿ ದೇಶಗಳಿಗಿಂತಲೂ ಅಧಿಕ ಖರ್ಚು ಮಾಡುತ್ತಿದೆ ಹಾಗೂ ತರಬೇತಿಗಾಗಿ ಸರಕಾರದ ಬಜೆಟ್‌ನ 7 ಶೇಕಡಕ್ಕಿಂತಲೂ ಅಧಿಕ ಮೊತ್ತವನ್ನು ಮೀಸಲಿಡಲಾಗುತ್ತಿದೆ ಎಂದು ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವ ಅಲಿ ಬಿನ್ ನಾಸಿರ್ ಅಲ್-ಘಫಿಸ್ ಹೇಳಿದ್ದಾರೆ.

‘‘ಸೌದಿ ಅರೇಬಿಯವು ಈ ನಿಟ್ಟಿನಲ್ಲಿ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ‘ನ್ಯಾಶನಲ್ ಟ್ರಾನ್ಸ್‌ಪೋರ್ಮೇಶನ್ ಪ್ರೋಗ್ರಾಮ್ (ಎನ್‌ಟಿಪಿ) 2020’ ಕಾರ್ಯಕ್ರಮಕ್ಕೆ ಪೂರಕವಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ’’ ಎಂದು ಸಚಿವರು ಹೇಳಿದರು.

ಎನ್‌ಟಿಪಿ 2020 ಕಾರ್ಯಕ್ರಮದ ಗುರಿಗಳನ್ನು ಸಾಧಿಸುವುದಕ್ಕಾಗಿ, ನಾಗರಿಕರಿಗೆ ಉದ್ಯೋಗ ನೀಡುವ ಕಾರ್ಯದಲ್ಲಿ ನಿರತವಾಗಿದೆ ಹಾಗೂ ಇದಕ್ಕಾಗಿ ‘ನಿತಾಕತ್’ ಮುಂತಾದ ಸೌದೀಕರಣ ಯೋಜನೆಗಳನ್ನು ಪರಿಷ್ಕರಿಸಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News