ಕ್ಯೂಎಸ್ ರ‍್ಯಾಂಕಿಂಗ್‌ನಲ್ಲಿ ಸೌದಿಯ 3 ವಿವಿಗಳು

Update: 2017-10-20 16:35 GMT

ರಿಯದ್ (ಸೌದಿ ಅರೇಬಿಯ), ಅ. 20: ಅರಬ್ ವಲಯಕ್ಕಾಗಿ ನೀಡಲಾಗುವ ಕ್ಯೂಎಸ್ ವಿಶ್ವವಿದ್ಯಾನಿಲಯ ರ‍್ಯಾಂಕಿಂಗ್‌ನಲ್ಲಿ ಸೌದಿ ಅರೇಬಿಯದ ಮೂರು ವಿಶ್ವವಿದ್ಯಾನಿಲಯಗಳು ಉನ್ನತ ಸ್ಥಾನಗಳನ್ನು ಗಳಿಸಿವೆ.

‘ಫೈವ್ ಸ್ಟಾರ್ ಪ್ಲಸ್’ ದರ್ಜೆಗಳನ್ನು ಪಡೆದ ಮೂರು ವಿಶ್ವವಿದ್ಯಾನಿಲಯಗಳೆಂದರೆ- ರಿಯಾದ್‌ನಲ್ಲಿರುವ ಕಿಂಗ್ ಫಾಹದ್ ಯುನಿವರ್ಸಿಟಿ ಆಫ್ ಪೆಟ್ರೋಲಿಯಂ ಆ್ಯಂಡ್ ಮಿನರಲ್ಸ್ (ಕೆಎಫ್‌ಯುಪಿಎಮ್) ಮತ್ತು ಕಿಂಗ್ ಸೌದ್ ಯುನಿವರ್ಸಿಟಿ (ಕೆಎಸ್‌ಯು) ಹಾಗೂ ಜಿದ್ದಾದಲ್ಲಿರುವ ಕಿಂಗ್ ಅಬ್ದುಲ್ ಅಝೀಝ್ ಯುನಿವರ್ಸಿಟಿ (ಕೆಎಯು).

ತನ್ನ ಶೈಕ್ಷಣಿಕ ಉನ್ನತಿಗೆ ಸೌದಿ ಅರೇಬಿಯ ತೆಗೆದುಕೊಳ್ಳುವ ಪ್ರತಿ ನಿರ್ಧಾರವು ಧನಾತ್ಮಕವಾಗಿರುತ್ತದೆ ಹಾಗೂ ತಂತ್ರಜ್ಞಾನ ಮತ್ತು ಸಂಶೋಧನೆಯ ಇಂದಿನ ಯುಗದಲ್ಲಿ ಅದು ತುರ್ತು ಅಗತ್ಯವಾಗಿದೆ ಎಂದು ಶೂರಾ ಕೌನ್ಸಿಲ್‌ನಲ್ಲಿರುವ ಮಹಿಳಾ ಪ್ರತಿನಿಧಿ ಡಾ. ತುರಯ್ಯಿ ಅರಾಯಿದ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News