ಮಹಿಳೆಯರು ಚಲಾಯಿಸುವ ವಾಹನಗಳು ಅಪಘಾತಕ್ಕೀಡಾದರೆ ವ್ಯವಹರಿಸಲು ಮಹಿಳಾ ಅಧಿಕಾರಿಗಳು

Update: 2017-10-21 16:25 GMT

ರಿಯಾದ್, ಅ. 21: ಮಹಿಳೆಯರು ಚಲಾಯಿಸುವ ವಾಹನಗಳು ಅಪಘಾತಕ್ಕೀಡಾದರೆ ಅವರೊಂದಿಗೆ ವ್ಯವಹರಿಸಲು ಮಹಿಳಾ ಅಧಿಕಾರಿಗಳನ್ನು ನಿಯೋಜಿಸಲು ಸೌದಿ ಅರೇಬಿಯದ ಸಾರಿಗೆ ಇಲಾಖೆ ಯೋಜನೆ ರೂಪಿಸುತ್ತಿದೆ.

2018ರ ಜೂನ್‌ನಿಂದ ಮಹಿಳೆಯರಿಗೂ ವಾಹನ ಚಾಲನೆ ಪರವಾನಿಗೆ ನೀಡಲಾಗುವುದು ಎಂಬ ರಾಜಾಜ್ಞೆಗೆ ಪೂರಕವಾಗಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ರಸ್ತೆ ಅಪಘಾತಗಳ ಸಂದರ್ಭಗಳಲ್ಲಿ ಚಾಲಕಿಯರ ಜೊತೆ ವ್ಯವಹರಿಸಲು ಮಹಿಳಾ ಅಧಿಕಾರಿಗಳನ್ನೇ ನಿಯೋಜಿಸುವ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ನಜಮ್ ಫಾರ್ ಇನ್ಶೂರೆನ್ಸ್ ಸರ್ವಿಸಸ್ ಕಂಪೆನಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News