ಸೌದಿಯಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ಅನುಮತಿ?

Update: 2017-10-22 17:31 GMT

ರಿಯಾದ್,ಅ.22: ಸೌದಿ ಆರೇಬಿಯದಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ಹೇರಲಾಗಿದ್ದ ನಿಷೇಧದ ರದ್ದತಿಗೆ ಕ್ಷಣಗಣನೆ ಆರಂಭವಾಗಿದ್ದು, ಇದಕ್ಕೆ ಮುನ್ಸೂಚನೆಯಾಗಿ ರಿಯಾದ್‌ನಲ್ಲಿ ಇತ್ತೀಚೆಗೆ ಚಲನಚಿತ್ರ ಪ್ರದರ್ಶನವೊಂದನ್ನು ಏರ್ಪಡಿಸಲಾಗಿತ್ತು.

 ಮಹಿಳೆಯರಿಗೆ ವಾಹನ ಚಾಲನೆಗೆ ಅವಕಾಶ ನೀಡುವ ಸುಗ್ರೀವಾಜ್ಞೆಯೊಂದನ್ನು ಸೌದಿ ಆಡಳಿತ ಜಾರಿಗೊಳಿಸಿದ ಕೆಲವೇ ದಿನಗಳ ಬಳಿಕ ಅಧಿಕಾರಿಗಳು, ಶೀಘ್ರದಲ್ಲೇ ಚಲನಚಿತ್ರ ಪ್ರದರ್ಶನಕ್ಕೂ ಅನುಮತಿ ನೀಡಲಾಗುವುದೆಂದು ತಿಳಿಸಿದ್ದಾರೆ.

 ಚಲನಚಿತ್ರಗಳು ಸೌದಿಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಗುರುತಿಗೆ ಬೆದರಿಕೆಯಾಗಿದೆಯೆಂದು ಕೆಲವು ಧಾರ್ಮಿಕ ಮುಖಂಡರು ವಿರೋಧ ವ್ಯಕ್ತಪಡಿಸಿದ ಕಾರಣ 1980ರಲ್ಲಿ ಸೌದಿಯಾದ್ಯಂತ ಸಿನೆಮಾ ಮಂದಿರಗಳನ್ನು ಮುಚ್ಚಲಾಗಿತ್ತು.

 ಸೌದಿ ಆರೇಬಿಯವು ಇತ್ತೀಚಿನ ತಿಂಗಳುಗಳಲ್ಲಿ ಸಂಗೀತಗೋಷ್ಠಿಗಳನ್ನು, ಪಾಪ್ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿದೆ. ಇದೇ ಮೊದಲ ಬಾರಿಗೆ ಸ್ತ್ರೀಯರು ಹಾಗೂ ಪುರುಷರು ಜೊತೆಯಾಗಿ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

  ನೆರೆಯ ಬಹರೈನ್ ಹಾಗೂ ದುಬೈಗಳಲ್ಲಿ ಸಿನೆಮಾ ಪ್ರದರ್ಶನಗಳನ್ನು ವೀಕ್ಷಿಸಲು ಹಾಗೂ ಮನರಂಜನಾ ಪಾರ್ಕ್‌ಗಳಿಗೆ ಭೇಟಿ ನೀಡಲು ಸೌದಿ ಪ್ರಜೆಗಳು ವಾರ್ಷಿಕವಾಗಿ ಕೋಟ್ಯಂತರ ಡಾಲರ್‌ಗಳನ್ನು ವ್ಯಯಿಸುತ್ತಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News