ಯಮನ್: ಸೌದಿ ಮೈತ್ರಿಕೂಟದ ದಾಳಿಯಲ್ಲಿ 29 ಸಾವು
Update: 2017-11-01 22:40 IST
ಸನಾ (ಯಮನ್), ನ. 1: ಉತ್ತರ ಯಮನ್‌ನ ಹೌದಿ ಬಂಡುಕೋರ ಪ್ರಾಬಲ್ಯದ ಮಾರುಕಟ್ಟೆ ಸ್ಥಳವೊಂದರ ಮೇಲೆ ಬುಧವಾರ ಸೌದಿ ಅರೇಬಿಯ ನೇತೃತ್ವದ ಮಿತ್ರಪಕ್ಷಗಳು ನಡೆಸಿದ ವಾಯು ದಾಳಿಯಲ್ಲಿ 29 ಮಂದಿ ಮೃತಪಟ್ಟಿದ್ದಾರೆ ಹಾಗೂ 17 ಮಂದಿ ಗಾಯಗೊಂಡಿದ್ದಾರೆ ಎಂದು ಹೌದಿ ಬಂಡುಕೋರರು ತಿಳಿಸಿದ್ದಾರೆ.
ಸಾದ ರಾಜ್ಯದಲ್ಲಿ ನಡೆದ ದಾಳಿಯನ್ನು ತಾನು ನಡೆಸಿರುವುದೇ ಎನ್ನುವುದನ್ನು ಸೌದಿ ಮೈತ್ರಿಕೂಟ ಖಚಿತಪಡಿಸಿಲ್ಲ.