ಕೆಸಿಎಫ್ ಹಜ್ಜ್ ಸ್ವಯಂಸೇವಕರಿಗೆ ಸನ್ಮಾನ ಸಮಾರಂಭ

Update: 2017-11-03 17:56 GMT

ಮದೀನಾ, ನ. 3: ಪವಿತ್ರ ಹಜ್ ಸಂದರ್ಭ ಹಾಜಿಗಳಿಗೆ ಸಹಕರಿಸಿದ ಕೆಸಿಎಫ್ ಹಜ್ ಸ್ವಯಂಸೇವಕರಿಗೆ ಸನ್ಮಾನ ಸಮಾರಂಭವು ಮದೀನಾ ಮುನವ್ವರದ ಕೆಸಿಎಫ್ ಭವನದಲ್ಲಿ ಶುಕ್ರವಾರ ನಡೆಯಿತು.

ಕರ್ನಾಟಕ ರಾಜ್ಯ ಸುನ್ನಿ ಮೇನೆಜ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ  ಅಸೈಯದ್ ಆಲವಿ ಜಲಾಲುದ್ದೀನ್ ಅಲ್ ಹಾದಿ ತಂಙಳ್ ಉಜಿರೆ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಕೆಸಿಎಫ್ ಮದೀನಾ ಝೋನಲ್ ಅಧ್ಯಕ್ಷ ಫಾರೂಕ್ ನಈಮಿ ಸರಳಿಕಟ್ಟೆ  ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಹಾಜಿಗಳ ಸೇವೆ ಮಾಡಿದರೆ ಹಜ್ ನಿರ್ವಹಿಸಿದ ಪುಣ್ಯ ಲಭಿಸಲಿದ್ದು, ಕೆಸಿಎಫ್ ಕಾರ್ಯಕರ್ತರು  ಸೇವೆ ಶ್ಲಾಘನೀಯವಾಗಿದ್ದು, ಇಂತಹ ಸೇವೆಯನ್ನು ಮುಂದುವರಿಸಬೇಕೆಂದು ಕರೆ ನೀಡಿದರು.

ಈ ವೇಳೆ ಅಸೈಯದ್ ಆಲವಿ ಜಲಾಲುದ್ದೀನ್ ಅಲ್ ಹಾದಿ ತಂಙಳ್ ಅವರು ಹಾಜಿಗಳ ಸೇವೆ ಮಾಡಿದ ಹಜ್ ಸ್ವಯಂ ಸೇವಕರಿಗೆ ಸನ್ಮಾನ ಪತ್ರ ನೀಡಿ ಗೌರವಿಸಿದರು. ಬಳಿಕ ಕೆಸಿಎಫ್ ಮದೀನಾ ಸೆಕ್ಟರ್ ವತಿಯಿಂದ ಅಸೈಯದ್ ಆಲವಿ ಜಲಾಲುದ್ದೀನ್ ಅಲ್ ಹಾದಿ ತಂಙಳ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ, ಹದೀಸ್ ಗ್ರಂಥ ನೀಡಿ ಗೌರವಿಸಲಾಯಿತು. 

ಈ ವೇಳೆ  ಕೆಸಿಎಫ್ ಮದೀನಾ ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ, ಕೆಸಿಎಫ್ ಮದೀನಾ ಸೆಕ್ಟರ್ ಖಜಾಂಚಿ ಇಸ್ಮಾಯಿಲ್ ಕಿನ್ಯಾ, ಕೆಸಿಎಫ್ ಕಾರ್ಯಕರ್ತರ ರಝಾಕ್ ಅಳಕೆ ಮಜಲು ಮತ್ತಿತರರು ಉಪಸ್ಥಿತರಿದ್ದರು.

ಅಬೂಬಕ್ಕರ್ ಉದ್ದಬೆಟ್ಟು ಕಿರಾಅತ್ ಪಠಿಸಿದರು.ಉಮ್ಮರ್ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
 

Writer - ಹಕೀಂ ಬೋಳಾರ್

contributor

Editor - ಹಕೀಂ ಬೋಳಾರ್

contributor

Similar News