ಅಬುಧಾಬಿ: ‘ಪ್ರಿಂಟ್ ಹೌಸ್’ ಶುಭಾರಂಭ

Update: 2017-11-04 12:13 GMT

ಅಬುಧಾಬಿ, ನ.4: ಇಲ್ಲಿನ ಅಲ್ ಫಲಾಹ್ ಸ್ಟ್ರೀಟ್‌ನಲ್ಲಿ ಹೊಸದಾಗಿ ಆರಂಭಗೊಂಡ ಮುದ್ರಣ ಮತ್ತು ಬ್ಯುಸಿನೆಸ್ ಪ್ರಮೋಶನ್ ಗಳಿಗಾಗಿರುವ ಗಿಫ್ಟ್‌ಗಳನ್ನೊಳಗೊಂಡ ನೂನತ ಮಳಿಗೆ ‘ಪ್ರಿಂಟ್ ಹೌಸ್’ ಅನ್ನು ಬ್ಯಾರೀಸ್ ವೆಲ್ಫೇರ್ ಫೋರಂ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಇತ್ತೀಚೆಗೆ ಉದ್ಘಾಟಿಸಿದರು.

‘ಪ್ರಿಂಟ್ ಹೌಸ್’ ಅಬುಧಾಬಿಯಲ್ಲಿನ ಜಾಹೀರಾತು ರಂಗದಲ್ಲಿ ಸಕ್ರಿಯವಾಗಿರುವ ಗ್ರಾಫಿಕ್ ಲ್ಯಾಂಡ್ ಸಂಸ್ಥೆಯ ಅಧೀನ ಸಂಸ್ಥೆಯಾಗಿದೆ.

ಅತಿಥಿಗಳಾಗಿ ಅನಿವಾಸಿ ಉದ್ಯಮಿಗಳಾದ ಹಾಮಿದ್ ಅಲಿ, ಅಬ್ದುಲ್   ಸಲಾಮ್ ಶಾರ್ಜಾ, ಮುಬಾರಕ್ ಅಬ್ದುರ್ರಝಾಕ್ ಪಿ.ಡಿ., ಕೇರಳ ಸೋಶಿಯಲ್ ಸೆಂಟರ್ ನ ಮೋಹನ್ ದಾಸ್, ಬ್ಯಾರೀಸ್ ವೆಲ್ಫೇರ್ ಫೋರಂನ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಮದುಮೂಲೆ ಹಾಗೂ ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಕನ್ನಡ ಘಟಕದ ಸ್ಥಾನೀಯ ಅಧ್ಯಕ್ಷ ವಿ.ಕೆ.ಅಬ್ದುಲ್ ರಶೀದ್ ವಿಟ್ಲ, ಉಪಸ್ಥಿತರಿದ್ದರು.

ಸಂಸ್ಥೆಯ ಪಾಲುದಾರರಾದ ಮುಬಾರಕ್ ಪಿ.ಡಿ. ಮತ್ತು ಅಬ್ದುಲ್ ಲತೀಫ್ ನೀರ್ಕಜೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News