ಶಾರ್ಜಾ ಪುಸ್ತಕ ಮೇಳಕ್ಕೆ ಚಾಲನೆ

Update: 2017-11-04 15:55 GMT

ರಿಯಾದ್, ನ. 4: ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳ (ಎಸ್‌ಐಬಿಎಫ್)ವನ್ನು ಶಾರ್ಜಾ ಗವರ್ನರ್ ಶೇಖ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್-ಖಾಸಿಮಿ ಬುಧವಾರ ಉದ್ಘಾಟಿಸಿದರು.

11 ದಿನಗಳ ಮೇಳದಲ್ಲಿ 60 ದೇಶಗಳ ಸುಮಾರು 1,691 ಪ್ರಕಾಶಕರು ಭಾಗವಹಿಸುತ್ತಿದ್ದಾರೆ. ಮೇಳದಲ್ಲಿ 15 ಲಕ್ಷಕ್ಕೂ ಅಧಿಕ ಪುಸ್ತಕಗಳಿವೆ.

ಸೌದಿ ಅರೇಬಿಯದ ಪುಸ್ತಕ ಮಳಿಗೆಯಲ್ಲಿ ಸಾಹಿತ್ಯ, ವಿಜ್ಞಾನ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದ 2,400 ಪುಸ್ತಕಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿದೆ.

ಉದ್ಘಾಟನೆ ಮಾಡಿದ ಶೇಖ್ ಸುಲ್ತಾನ್ ಸ್ವತಃ ನಾಲ್ಕು ಹೊಸ ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಸಿರಿಯ ನಟ ಹಸನ್ ಮಸೂದ್, ಅಲ್ಜೀರಿಯದ ಕಾದಂಬರಿಕಾರ ವಸೀನಿ ಅಲ್- ಆರ್ಜ್, ಸೌದಿ ಲೇಖಕ ಅಬ್ದು ಅಲ್-ಖಾಲ್, ಕುವೈತ್ ಕಾದಂಬರಿಕಾರ ಸೌದ್ ಅಲ್-ಸನೂಸಿ ಮತ್ತು ಇರಾಕ್ ಕಾದಂಬರಿಕಾರ ಸಿನಾನ್ ಅಂತೂನ್ ಈ ಬಾರಿಯ ಪುಸ್ತಕ ಮೇಳದಲ್ಲಿ ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News