ವಿಮಾನ ನಿಲ್ದಾಣಕ್ಕೆ ಗುರಿಯಿಟ್ಟ ಕ್ಷಿಪಣಿಯನ್ನು ಹೊಡೆದುರುಳಿಸಿದ್ದೇವೆ: ಸೌದಿ ಅರೇಬಿಯ

Update: 2017-11-05 04:57 GMT

ರಿಯಾದ್, ನ.5: ಯೆಮನ್‌ನಿಂದ ಶನಿವಾರ ತನ್ನ ಪ್ರಮುಖ ವಿಮಾನ ನಿಲ್ದಾಣವೊಂದರ ಮೇಲೆ ಹಾರಿಸಲಾದ ಕ್ಷಿಪಣಿಯೊಂದನ್ನು ತನ್ನ ಪಡೆಗಳು ಗುರುತಿಸಿ ಹೊಡೆದುರುಳಿಸಿದೆ ಎಂದು ರವಿವಾರ ಸೌದಿ ಅರೇಬಿಯಾ ಹೇಳಿದೆ.

ಯೆಮನ್‌ನ ಸೌದಿ ಬಂಡುಕೋರರು ಸೌದಿ ಅರೇಬಿಯಾದ ದಕ್ಷಿಣ ಗಡಿಯುದ್ದಕ್ಕೆ ಕ್ಷಿಪಣಿಯನ್ನು ಹಾರಿಸಿದ್ದರು ಎಂದು ಸೌದಿ ಬಂಡುಕೋರರ ಮಾಲಕತ್ವದ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.

ತನ್ನ ವಾಯು ಪಡೆ ಯೆಮನ್‌ನಿಂದ ಹಾರಿಸಲಾದ ಕ್ಷಿಪಣಿಯನ್ನು ಹೊಡೆದುರುಳಿಸಿದ್ದು, ಅದರ ಕೆಲವು ತುಣುಕುಗಳು ರಾಜಧಾನಿ ರಿಯಾದ್‌ನ ನಿರ್ವಸಿತ ಪ್ರದೇಶಗಳಲ್ಲಿ ಬಿದ್ದಿವೆ ಎಂದು ಸೌದಿ ಹೇಳಿದೆ. ಈ ಕ್ಷಿಪಣಿ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾವುದೇ ಹಾನಿ ಉಂಟು ಮಾಡಿಲ್ಲ ಹಾಗೂ ಯಾವುದೇ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿಲ್ಲ ಎಂದು ಸೌದಿ ವಿಮಾನ ನಿಲ್ದಾಣ ಪ್ರಾಧಿಕಾರ ಹೇಳಿದೆ.

ಇದೇ ಮೊದಲ ಬಾರಿಗೆ ಸೌದಿ ಬಂಡುಕೋರರ ಕ್ಷಿಪಣಿಯೊಂದು ಸೌದಿಯ ಪ್ರಮುಖ ನಗರ ಹಾಗೂ ಜನವಸತಿ ಪ್ರದೇಶದ ಸಮೀಪಕ್ಕೆ ತಲುಪಿದೆ. ರಿಯಾದ್ ನಗರ ಯೆಮನ್‌ನ ಗಡಿಯಿಂದ ಸಾವಿರ ಕಿ.ಮಿ. ದೂರದಲ್ಲಿದೆ.

ಈ ಕ್ಷಿಪಣಿ ದಾಳಿಯನ್ನು ಸೌದಿ ಮಿಲಿಟರಿ ವಕ್ತಾರರೊಬ್ಬರು ಖಂಡಿಸಿದ್ದು, ಜನ ವಸತಿ ಪ್ರದೇಶದ ಮೇಲೆ ಬೇಕಾಬಿಟ್ಟಿಯಾಗಿ ಕ್ಷಿಪಣಿಯನ್ನು ಹಾರಿಸಲಾಗಿದೆ ಎಂದು ಆರೋಪಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News