×
Ad

ಲೆಬನಾನ್‌ಗೆ ಪ್ರಯಾಣಿಸದಂತೆ ಪ್ರಜೆಗಳಿಗೆ ಸೌದಿ ಅರೇಬಿಯ ಸೂಚನೆ

Update: 2017-11-10 22:11 IST

ದುಬೈ, ನ. 10: ಲೆಬನಾನ್‌ಗೆ ಪ್ರಯಾಣಿಸದಂತೆ ಸೌದಿ ಅರೇಬಿಯ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ ಹಾಗೂ ಈಗಾಗಲೇ ಆ ದೇಶದಲ್ಲಿರುವ ಪ್ರಜೆಗಳು ಆದಷ್ಟು ಬೇಗ ವಾಪಸ್ ಬರುವಂತೆ ಸೂಚನೆ ನೀಡಿದೆ ಎಂದು ಸೌದಿ ಅರೇಬಿಯದ ಅಧಿಕೃತ ಸುದ್ದಿ ಸಂಸ್ಥೆ ಸೌದಿ ಪ್ರೆಸ್ ಏಜನ್ಸಿ (ಎಸ್‌ಪಿಎ) ವರದಿ ಮಾಡಿದೆ.

‘‘ಲೆಬನಾನ್‌ನಲ್ಲಿ ನೆಲೆಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಆ ದೇಶಕ್ಕೆ ಪ್ರವಾಸ ಹೊರಟಿರುವ ಅಥವಾ ಅಲ್ಲಿ ನೆಲೆಸಿರುವ ಸೌದಿ ಪ್ರಜೆಗಳು ಕೂಡಲೇ ಅಲ್ಲಿಂದ ಹೊರಡುವಂತೆ ಸೌದಿ ಅರೇಬಿಯ ಸೂಚಿಸಿದೆ ಎಂದು ಸೌದಿ ವಿದೇಶ ಸಚಿವಾಲಯದಲ್ಲಿರುವ ಮೂಲವೊಂದು ಹೇಳಿದೆ’’ ಎಂದು ಎಸ್‌ಪಿಎ ತಿಳಿಸಿದೆ.

ಲೆಬನಾನ್ ಪ್ರಧಾನಿ ಸಅದ್ ಹರೀರಿ ಶನಿವಾರ ಸೌದಿ ಅರೇಬಿಯದಲ್ಲಿ ತನ್ನ ರಾಜೀನಾಮೆ ಘೋಷಣೆ ಮಾಡುವುದರೊಂದಿಗೆ ಲೆಬನಾನ್‌ನಲ್ಲಿ ರಾಜಕೀಯ ಬಿಕ್ಕಟ್ಟು ಗರಿಗೆದರಿದೆ. ಅವರೀಗ ಸೌದಿ ಅರೇಬಿಯದಲ್ಲೇ ಆಶ್ರಯ ಪಡೆದಿದ್ದಾರೆ.

ತನ್ನ ಸಮ್ಮಿಶ್ರ ಸರಕಾರದಲ್ಲಿ ಪಾಲುದಾರನಾಗಿದ್ದ ಹಿಝ್ಬುಲ್ಲಾ ಲೆಬನಾನನ್ನು ಒತ್ತೆಸೆರೆಯಾಗಿರಿಸಿದೆ ಎಂದು ಹರೀರಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News