×
Ad

ಶಾರ್ಜಾ ಶಾಂತಿ ಪ್ರಕಾಶನ ಪುಸ್ತಕ ಮಳಿಗೆಗೆ ಅದ್ಧೂರಿ ತೆರೆ

Update: 2017-11-12 23:36 IST

ದುಬೈ, ನ.12: ಇಲ್ಲಿ ನಡೆದ ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಹಾಕಲಾಗಿದ್ದ ಏಕೈಕ ಕನ್ನಡ ಪುಸ್ತಕಗಳ ಮಳಿಗೆ ಶಾಂತಿ ಪ್ರಕಾಶನ ಪುಸ್ತಕ ಮಳಿಗೆಯ ಸಮಾರೋಪ ಸಮಾರಂಭ ನಿನ್ನೆ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.

ಶಾಂತಿ ಪ್ರಕಾಶನದ ಮುಖ್ಯಸ್ಥರಾದ ಜನಾಬ್ ಎಂ. ಅತರುಲ್ಲಾ ಶರೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಜನಾಬ್ ಮುಹಮ್ಮದ ಕುನ್ಹಿ ಮುಖ್ಯ ಭಾಷಣ ಮಾಡಿದರು. ಕೆಎನ್‌ಆರ್‌ಐ ಫಾರಂನ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ನೂರಕ್ಕೂ ಅಧಿಕ ಮಂದಿ ಈ ಸಮಾರಂಭದ ಭಾಗವಹಿಸಿದ್ದು, ಪುಸ್ತಕ ಮೇಳದಲ್ಲಿ ಏಕೈಕ ಕನ್ನಡ ಪುಸ್ತಕಗಳ ಮಳಿಗೆಯನ್ನು ತೆರೆದ ಸಂಘಟಕರ ಪರಿಶ್ರಮ ಮತ್ತು ಸಮರ್ಪಣಾಭಾವವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಇಮ್ರಾನ್ ಎಂಬವರು ಕುರಾನ್ ಪಠಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸರ್ವೋತ್ತಮ್ ಶೆಟ್ಟಿ, ಮುಹಮ್ಮದ್ ಅಲಿ ಉಚ್ಚಿಲ್, ಮುರುಗೇಶ್, ನಾಸಿರ್ ನಂದಾವರ, ಸದನ್ ದಾಸ್, ಅಬ್ದುಲ್ಲಾ ಮಡುಮೂಲೆ, ಎರ್ಸಾದ್ ಮೂಡಬಿದ್ರೆ, ಮನೋಹರ್ ತೋನ್ಸೆ, ನೋಯೆಲ್ ಅಲ್ಮಡಾ, ಸಲಾಂ ದೇರಳಕಟ್ಟೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಅಬ್ದುಲ್ ಖಾದರ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರೆ ಅಬ್ದುಲ್ ಸಲಾಂ ಧನ್ಯವಾದ ಸಮರ್ಪಿಸಿದರು. ವಿಕೆ ರಶೀದ್, ಇಮ್ರಾನ್ ಅಹ್ಮದ್, ಬಶೀರ್, ವಿಕೆ ಜಾಫರ್ ಸಾದಿಕ್, ಮುಬಾರಕ್, ಇರ್ಫಾನ್ ಅಹ್ಮದ್ ಮತ್ತವರ ತಂಡ ಕಾರ್ಯಕ್ರಮದ ಗೆಲುವಿಗೆ ಶ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News