ನೂರುಲ್ ಹುದಾ ದುಬೈ ಕಿಸೈಸ್ ಕ್ಲಸ್ಟರ್ ಅಸ್ಥಿತ್ವಕ್ಕೆ: ನೂತನ ಪದಾಧಿಕಾರಿಗಳ ಆಯ್ಕೆ

Update: 2017-11-18 17:30 GMT

ದುಬೈ, ನ. 18:  ದಾರುಲ್ ಹುದಾ ಇಸ್ಲಾಮಿಕ್ ವಿಶ್ವ ವಿದ್ಯಾಲಯ ಚೆಮ್ಮಾಡ್ ಇದರ ಅಂಗ ಸಂಸ್ಥೆಯಾದ ಕರ್ನಾಟಕದ ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಮಾಡನ್ನೂರು ಇದರ ದುಬೈ ಸಮಿತಿ ಅಧೀನದಲ್ಲಿ  ಅನ್ವರ್ ಮಣಿಲ ಅವರ ಅಧ್ಯಕ್ಷತೆಯಲ್ಲಿ ನೂರುಲ್ ಹುದಾ ಕಿಸೈಸ್ ಕ್ಲಸ್ಟರ್ ರೂಪೀಕರಣ ಕಾರ್ಯಕ್ರಮವು ಇತ್ತೀಚೆಗೆ  ಕಿಸೈಸ್ ರಿಹಾನ್ ರೆಸ್ಟೋರೆಂಟ್ ನಲ್ಲಿ ನಡೆಯಿತು.

ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೌಡಿಚ್ಚಾರ್  ಸಭೆಯನ್ನು ಉದ್ಘಾಟಿಸಿ, ಮಾತನಾಡಿ ನೂರುಲ್ ಹುದಾ ವಿದ್ಯಾ ಸಂಸ್ಥೆಯ  ಪರಿಚಯ ಮಾಡಿದರು.

ನೂರುಲ್ ಹುದಾ ದುಬೈ ಸಮಿತಿ ಕಾರ್ಯಾದ್ಯಕ್ಷ ಅನ್ವರ್ ಮಣಿಲ ಮಾತನಾಡಿ ದುಬೈ ಸಮಿತಿ ಮತ್ತು ಅದೀನ ಸಮಿತಿಗಳ ಕಾರ್ಯ ವೈಖರಿಗಳನ್ನು ಮತ್ತು ಮುಂದೆ ಆಯ್ಕೆಯಾಗುವ ಪದಾಧಿಕರಿಗಳ ಜವಾಬ್ದಾರಿಗಳನ್ನು ವಿವರಿಸಿ, ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು.
ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಗೌರವಾಧ್ಯಕ್ಷರಾಗಿ ಶರೀಫ್ ಕೊಡಿನೀರು, ಅದ್ಯಕ್ಷರಾಗಿ ಖಾದರ್ ಹಾಜಿ ಸಂಪ್ಯ, ಪ್ರಧಾನ ಕಾರ್ಯದರ್ಶಿ : ಶರೀಫ್ ಇಬ್ರಾಹಿಂ ಕಾವು, ಕೋಶಾಧಿಕಾರಿ : ರಿಫಾಯಿ ಅರಂತೊಡು, ಉಪಾಧ್ಯಕ್ಷರು : ಹೈದರ್ ಅಲಿ ಕೆ.ಎಚ್, ತಮೀಮ್ ಮಲಪ್ಪುರಂ., ಕಾರ್ಯದರ್ಶಿಗಳು : ಶಂಶುದ್ದೀನ್ ಇಂದುಮೂಲೆ, ಸಿದ್ದೀಕ್ ಕೆ.ಎಚ್., ಸಂಘಟನಾ ಕಾರ್ಯದರ್ಶಿಗಳು : ಅಬ್ದುಲ್ ಲತೀಫ್ ಆರ್ತಿಗೆರೆ., ಸಂಚಾಲಕರು : ಹುಸೈನ್ ರೆಂಜಲಾಡಿ, ಮೂಸ ಅಲ್ ಕರೀಮ್ ಕಟ್ಟತ್ತಾರ್, ಸಾದಿಕ್ ಅಲಿ ಕ್ಯಾಲಿಕಟ್.
ಕಾರ್ಯಕಾರಿ ಸಮಿತಿ ಸದಸ್ಯರು: ಮಜೀದ್ ಬಡಗನ್ನೂರು, ರಫೀಕ್ ಎತಿರ್ ತೋಡು, ರಶೀದ್ ಶೇಖಮಲೆ, ಸಲೀಂ ಉಳ್ಳಾಳ, ಸಫೀರ್ ಉಡುಪಿ, ಅಶ್ರಫ್ ಸಂಪ್ಯ ಮೊದಲಾದವರನ್ನು ಆರಿಸಲಾಯಿತು.

ರಾಷ್ಟ್ರೀಯ ಸಮಿತಿಯ ಅಧ್ಯಕ್ಷ  ಶರೀಫ್ ಕಾವು ಅವರು ಮಾತನಾಡಿ ಯುಎಇ ಸಮಿತಿಯ ಕಾರ್ಯ ವೈಖರಿಗಳನ್ನು ವಿವರಿಸಿ ಎಲ್ಲರ ಸಹಕಾರವನ್ನು ಕೋರುತ್ತಾ ನೂತನ ನೂತನ ಸಮಿತಿಗೆ ಶುಭ ಹಾರೈಸಿದರು. ನೂತನ ಸಮಿತಿಯ ಗೌರವಾಧ್ಯಕ್ಷ ಶರೀಫ್ ಕೊಡಿನೀರು, ಕೋಶಾಧಿಕಾರಿ ರಿಫಾಯಿ ಅರಂತೊಡು, ಸಂಘಟನಾ ಕಾರ್ಯದರ್ಶಿ ಲತೀಫ್ ಆರ್ತಿಗೆರೆ, ಉಪಾಧ್ಯಕ್ಷರು ಹೈದರ್ ಅಲಿ  ಮಾತನಾಡಿ ಸಮಿತಿಯ ಅಭಿವೃದ್ಧಿಗೆ ಸಹಕಾರದ ಭರವಸೆಯನ್ನು ನೀಡಿದರು.

ನೂರುಲ್ ಹುದಾ ದುಬೈ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಝೀಝ್ ಸೋಂಪಾಡಿ ಅವರು ಕಾರ್ಯಕ್ರಮ ನಿರೂಪಿಸಿದರು, ಕಿಸೈಸ್ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಶರೀಫ್ ಇಬ್ರಾಹಿಮ್ ಕಾವು ವಂದಿಸಿದರು.

Writer - ಅಝೀಝ್ ಸೋಂಪಾಡಿ

contributor

Editor - ಅಝೀಝ್ ಸೋಂಪಾಡಿ

contributor

Similar News