ದಾರುನ್ನೂರ್ ವತಿಯಿಂದ ದುಬೈಯಲ್ಲಿ ಸನ್ಮಾನ, ಅನಾವರಣ ಸಮಾರಂಭ

Update: 2017-11-18 17:49 GMT

ದುಬೈ, ನ. 18; : ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡುಬಿದಿರೆ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಾರುನ್ನೂರ್  ಯು ಎ ಇ ಕಲ್ಚರಲ್ ಸೆಂಟರ್ ಇದರ  ವತಿಯಿಂದ ಇತ್ತೀಚೆಗೆ ದುಬೈ ದೇರಾ ಸಿಟಿ ಸೆಂಟರ್ ಪಕ್ಕದ ಪರ್ಲ್ ಸಿಟಿ  ಸೂಟ್ ಹೋಟೆಲ್ ಅಡಿಟೋರಿಯಮ್ ನಲ್ಲಿ ದಾರುನ್ನೂರ್ ಕೇಂದ್ರ ಸಮಿತಿ ಪ್ರಮುಖರಿಗೆ ಸನ್ಮಾನ ಮತ್ತು ಕಾಶಿಪಟ್ಣದಲ್ಲಿರುವ ದಾರುನ್ನೂರ್ ಸಮುಚ್ಚಯದಲ್ಲಿ  ಹೊಸತಾಗಿ ನಿರ್ಮಾಣ ಗೊಳ್ಳಲಿರುವ ದಾರುನ್ನೂರ್ ವಿಮೆನ್ಸ್ ಶರಿಯತ್ ಕಾಲೇಜ್ ಇದರ  ಕಟ್ಟಡ ಪ್ಲಾನಿಂಗ್  ಅನಾವರಣಗೊಳಿಸುವ  ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ದಾರುನ್ನೂರ್ ಕೇಂದ್ರ ಸಮಿತಿ ಗೌರವಾದ್ಯಕ್ಷರೂ, ದಾರುನ್ನೂರಿನ ಶಿಲ್ಪಿಯೂ ಆಗಿರುವ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ ಹರಿ,  ದಾರುನ್ನೂರ್ ಇದರ ಡೈರೆಕ್ಟರ್, ಮಾಜಿ ಯಂ ಯಲ್ ಸಿ, ಮುಸ್ಲಿಂ ಸೆಂಟ್ರಲ್ ಕಮಿಟಿ ಅದ್ಯಕ್ಷ, ಅಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ದಕ್ಷಿಣ ಕನ್ನಡ ಜಿಲ್ಲಾದ್ಯಕ್ಷ, ಕರ್ನಾಟಕ ಮೈನಾರಿಟಿ ಕಮಿಷನ್ ಮಾಜಿ ಚೇರ್ಮೇನ್ ಆಗಿರುವ  ಅಲ್ ಹಾಜ್ ಕೆ . ಯಸ್ ಮಹಮ್ಮದ್ ಮಸೂದ್, ದಾರುನ್ನೂರ್  ಕೇಂದ್ರ ಸಮಿತಿ ಉಪಾದ್ಯಕ್ಷ,   ಉದ್ಯಮಿ ಯಫ್ ಅಹ್ಮದ್  ಹಾಜಿ ಫರಂಗಿಪೇಟೆ , ದಾರುನ್ನೂರ್  ಕೇಂದ್ರ ಸಮಿತಿ ಉಪಾದ್ಯಕ್ಷ ಸಿ ಯಂ ಉಸ್ತಾದ್, ಆಕ್ಷನ್ ಸಮಿತಿ ಅದ್ಯಕ್ಷ  ಮಮ್ಮುಞ  ಹಾಜಿ , ದಾರುನ್ನೂರ್  ಕೇಂದ್ರ ಸಮಿತಿ ಕಾರ್ಯದರ್ಶಿ ಐ  ಮೊಯಿದಿನಬ್ಬ ಹಾಜಿ ಇಡ್ಯಾ, ದಾರುನ್ನೂರ್  ಕೇಂದ್ರ ಸಮಿತಿ ಕಾರ್ಯದರ್ಶಿ ಶಾಹುಲ್ ಹಮೀದ್ ಹಾಜಿ ಮೆಟ್ರೋ , ದಾರುನ್ನೂರ್ ಕೇಂದ್ರ ಸಮಿತಿಯ ಜನರಲ್ ಮ್ಯಾನೇಜರ್  ಹಾಸ್ಕೋ ಅಬ್ದುಲ್ ರಹಿಮನ್ ಹಾಜಿ , ದಾರುನ್ನೂರ್  ಕೇಂದ್ರ ಸಮಿತಿ ಸದಸ್ಯ ಹಾಜಿ ಮಹಮ್ಮದ್ ಹಾರಿಸ್, ದಾರುನ್ನೂರ್  ಕೇಂದ್ರ ಸಮಿತಿ ಸದಸ್ಯ ರಿಯಾಝುದ್ದೀನ್ ಹಾಜಿ ಬಂದರ್ ,  ನಂಡೆ ಪೆಂಙಲ್ ಮ್ಯಾರೇಜ್ ಎಸೋಸಿಯೇಶನ್ ಇದರ ಅದ್ಯಕ್ಷ  ನೌಷಾದ್ ಹಾಜಿ ಸೂರಲ್ಪಾಡಿ , ದಾರುನ್ನೂರ್ ಎಜುಕೇಷನ್ ಅಕಾಡಮಿ ಪ್ರಾಂಶುಪಾಲರಾದ  ಉಸ್ತಾದ್  ಹುಸೈನ್ ರಹ್ಮಾನಿ,  ಭಾರತ್ ಕನ್ಶ್ಟ್ರೆಕ್ಷನ್  ಮಾಲಕ ಮುಸ್ತಫಾ ಮಂಗಳೂರು, ಅಲ್ ಮುಝೈನ್ ಸಂಸ್ಥೆಯ ಮಾಲಕ ಝಕರಿಯಾ ಜೋಕಟ್ಟೆ, ಸೈಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್  ಅಧ್ಯಕ್ಷ ರಶೀದ್ ಹಾಜಿ ಉಳ್ಳಾಲ,  ದಾರುನ್ನೂರ್ ಯು ಎ ಇ ಪೋಷಕರಾದ  ಅಬ್ದುಲ್ಲಾ ಹಾಜಿ ಮದುಮೂಲೆ, ದಾರುನ್ನೂರ್ ಯು ಎ ಇ  ಸಲಹೆಗಾರರಾದ ಸಯ್ಯದ್ ಆಸ್ಕರ್ ಅಲಿ ತಂಙಳ್ , ಹಾಜಿ ಮುಹಿದ್ದೀನ್ ಕುಟ್ಟಿ ಕಕ್ಕಿಂಜೆ,  ರವೂಫ್ ಹಾಜಿ ಕೈಕಂಬ,  ಅಶ್ರಫ್ ಖಾನ್ ಮಾಂತೂರ್,  ಅಶ್ರಫ್ ಬಾಳೆ ಹೊನ್ನೂರ್  ಚೀಫ್ ಇಂಜಿನಿಯರ್ ನಕೀಲ್ ಗ್ರೂಪ್, ಸಂಶುದ್ದೀನ್ ಕಲ್ಕಾರ್,  ಅಡ್ವೋಕೇಟ್ ಖಲೀಲ್ ಇಬ್ರಾಹಿಂ ಅರಿಮಲ,  ಆಸಿಫ್ ಕೆ ಯಸ್ ಕಾರ್ಕಳ , ಬಿ ಡಬ್ಲ್ಯು ಯಫ್  ಅಧ್ಯಕ್ಷ  ಮಹಮ್ಮದ್ ಅಲಿ ಉಚ್ಚಿಲ್,   ಸಿದ್ದೀಕ್ ಉಚ್ಚಿಲ್ ,  ಬಶೀರ್ ಬೊಲ್ವಾರ್ ,  ಫೈಝಲ್ ಸೋನಿಕ್, ಅಲ್ ಬಹಾರ್ ಡೀಸೆಲ್  ಮಾಲಕ  ಖಾಲಿದ್ ಮೂಡಬಿದ್ರಿ ಮೊದಲಾದವರು ಆಗಮಿಸಿದ್ದರು.

 ನಿಸಾರ್ ಅಹ್ಮದ್ ಕಾರ್ಕಳ,  ಆಸಿಫ್ ಕೆ ಯಸ್  ಮಸೂದ್,  ರಶೀದ್ ಹಾಜಿ ಉಳ್ಳಾಲ, ಎಡ್ವೋಕೇಟ್ ಖಲೀಲ್ ಇಬ್ರಾಹಿಂ ಅರಿಮಲ ಮೊದಲಾದವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮ ಯಶಸ್ವಿಗೆ ದಾರುನ್ನೂರ್ ಯು ಎ ಇ ಕೋರ್ ಸಮಿತಿಯ ಪ್ರಮುಖರಾದ ಅಬ್ದುಲ್ ಸಲಾಂ ಬಪ್ಪಳಿಗೆ,  ಮಹಮ್ಮದ್ ರಫೀಕ್ ಸುರತ್ಕಲ್,  ಮಹಮ್ಮದ್ ಮಾಡಾವು ,  ಸಂಶುದ್ದೀನ್ ಸೂರಲ್ಪಾಡಿ , ಮಹಮ್ಮದ್ ರಫೀಕ್ ಆತೂರ್,  ಸಾಜಿದ್ ಬಜ್ಪೆ, ನವಾಝ್ ಬಿ.ಸಿ ರೋಡ್,  ಮಹಮ್ಮದ್ ಹನೀಫ್ ಕೆ.ಪಿ ಮೂಡಬಿದ್ರಿ,  ಉಸ್ಮಾನ್ ಕೆಮ್ಮಿಂಜೆ,   ಸಫಾ ಇಸ್ಮಾಯಿಲ್ ಬಜ್ಪೆ,   ಅಬ್ದುಲ್ ನಸೀರ್ ಸುರತ್ಕಲ್,  ಮುಸ್ತಾಕ್ ಮಹಮ್ಮದ್ ತೋಡಾರ್ ಮೊದಲಾದವರು ಸಹಕರಿಸಿದರು.

ದಾರುನ್ನೂರ್ ಯು ಎ ಇ ಎಡ್ಮಿನ್ ಸೆಕ್ರೆಟರಿ  ಸಮೀರ್ ಇಬ್ರಾಹಿಂ ಕಲ್ಲರೆ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News