ದಮ್ಮಾಮ್: ಸ್ಟೂಡೆಂಟ್ ಫ್ರೆಟರ್ನಿಟಿ ಫೋರಮ್ ವತಿಯಿಂದ 'ಬ್ಲೂಮ್ 2017' ಕಾರ್ಯಕ್ರಮ

Update: 2017-11-18 17:58 GMT

ಸೌದಿ ಅರೇಬಿಯಾ, ನ. 19: ದಮ್ಮಾಮ್ ನಲ್ಲಿ ಸ್ಟೂಡೆಂಟ್ ಫ್ರೆಟರ್ನಿಟಿ ಫೋರಮ್ ವತಿಯಿಂದ ಮಕ್ಕಳ ದಿನಾಚರಣೆಯ ಪ್ರಯುಕ್ತ ಅನಿವಾಸಿ ಭಾರತೀಯ ಶಾಲಾ ಮಕ್ಕಳಿಗಾಗಿ 'ಬ್ಲೂಮ್ 2017' ಕಾರ್ಯಕ್ರಮವನ್ನು ಇತ್ತೀಚೆಗೆ ದಮ್ಮಾಮ್ ನ ಅಲ್ ಜಾವಿದ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಐದನೇ ತರಗತಿಯಿಂದ ಎಂಟನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ನಾಲ್ಕು ತಂಡಗಳನ್ನು ರಚಿಸಿ ವಿವಿಧ ಸಾಂಸ್ಕೃತಿಕ ಹಾಗೂ ಆಟೋಪ ಕಾರ್ಯಕ್ರಮಗಳನ್ನು ನಡೆಸಲಾಯಿತು. ನಂತರ ವಿದ್ಯಾರ್ಥಿ ಹಾಗೂ ರಕ್ಷಕರಿಗೆ ಸೂಕ್ತ ಮಾಹಿತಿ ನೀಡುವ ಉದ್ದೇಶದಿಂದ "ವಿದ್ಯಾರ್ಥಿ - ಹೆತ್ತವರು ಮತ್ತು ಶಾಲೆ " ಎಂಬ ಕಿರು ನಾಟಕವನ್ನು ಆಯೋಜಿಸಲಾಗಿತ್ತು.

ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ಗುರಿ ಸಾಧನೆ ಮತ್ತು ವಿದ್ಯಾರ್ಥಿಗಳ ಪೋಷಕರಿಗೆ ಶಾಲೆ ಮತ್ತು ಮಕ್ಕಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಇಂಡಿಯನ್ ಫ್ರೆಟರ್ನಿಟಿ ಫೋರಮ್ ನ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಾಜಿದ್ ವಳವೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಇಂಡಿಯನ್ ಸೋಶಿಯಲ್ ಫೋರಮ್ ನ ಕರ್ನಾಟಕ ರಾಜ್ಯ ಅಧ್ಯಕ್ಷ ಆರಿಫ್ ಜೋಕಟ್ಟೆ,   ಸ್ಟೂಡೆಂಟ್ ಫ್ರೆಟರ್ನಿಟಿ ಫೋರಮ್ ಇದರ ರಾಜ್ಯ ಸಂಚಾಲಕ ಮುಹಮ್ಮದ್ ಇರ್ಷಾದ್ ಬಜ್ಪೆ ಉಪಸ್ಥಿತರಿದ್ದರು.  ಸ್ಟೂಡೆಂಟ್ ಫ್ರೆಟರ್ನಿಟಿ ಫೋರಮ್ ಇದರ ಕಾರ್ಯಕ್ರಮಗಳು ಮತ್ತು ಅನಿವಾಸಿ ಭಾರತೀಯ ವಿದ್ಯಾರ್ಥಿಗಳಿಗಾಗಿ ಸಂಘಟಿಸಿದ ಕಾರ್ಯಕ್ರಮಗಳ ಬಗ್ಗೆ ಮುಹಮ್ಮದ್ ಇರ್ಷಾದ್ ಬಜ್ಪೆ ವಿವರಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ  ಜಯಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಸಲಾಯಿತು. ಮುಹಮ್ಮದ್ ಅಝರ್ ತೋಡಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News