ಸೌದಿ: ತೈಲೇತರ ಆದಾಯದಲ್ಲಿ 80 ಶೇ. ಏರಿಕೆ

Update: 2017-11-20 16:04 GMT

ಲಂಡನ್, ನ. 20: ಸೌದಿ ಅರೇಬಿಯದ ಆರ್ಥಿಕ ಸುಧಾರಣಾ ಯೋಜನೆಗಳು ಫಲ ನೀಡುತ್ತಿದ್ದು, 2017ರ ಮೂರನೆ ತ್ರೈಮಾಸಿಕದಲ್ಲಿ ದೇಶದ ತೈಲೇತರ ಆದಾಯದಲ್ಲಿ 80 ಶೇಕಡ ಏರಿಕೆಯಾಗಿದೆ ಎಂದು ರವಿವಾರ ಪ್ರಕಟಗೊಂಡ ಅಂಕಿಸಂಖ್ಯೆಗಳು ತಿಳಿಸಿವೆ.

2014ರ ಮಧ್ಯಭಾಗದಿಂದ ತೈಲಬೆಲೆಯಲ್ಲಿ ಭಾರೀ ಕುಸಿತ ಸಂಭವಿಸಿದ ಬಳಿಕ, ಕಳೆದ ವರ್ಷ ಸೌದಿ ಅರೇಬಿಯವು ಮಹತ್ವಾಕಾಂಕ್ಷೆಯ ‘ಮುನ್ನೋಟ 2030’ ಯೋಜನೆಯನ್ನು ಅನಾವರಣಗೊಳಿಸಿತ್ತು. ದೇಶದ ಆರ್ಥಿಕತೆಯನ್ನು ತೈಲದಿಂದ ಬೇರ್ಪಡಿಸುವುದು ಈ ಯೋಜನೆಯ ಗುರಿಯಾಗಿದೆ.

 ಯೋಜನೆಯು ಫಲಕಾರಿಯಾಗಿರುವಂತೆ ಕಂಡುಬರುತ್ತಿದ್ದು, ತೈಲೇತರ ಆದಾಯವು 2017ರ ಮೂರನೆ ತ್ರೈಮಾಸಿಕದಲ್ಲಿ 47.8 ಬಿಲಿಯನ್ ಸೌದಿ ರಿಯಾಲ್ (82,982 ಕೋಟಿ ರೂಪಾಯಿ)ಗೆ ಏರಿದೆ ಹಾಗೂ ಒಟ್ಟು ಆದಾಯದಲ್ಲಿ 11 ಶೇಕಡದಷ್ಟು ಏರಿಕೆಯಾಗಿದ್ದು, 142.1 ಬಿಲಿಯನ್ ಸೌದಿ ರಿಯಾಲ್ (2.47 ಲಕ್ಷ ಕೋಟಿ ರೂಪಾಯಿ) ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News