‘ತುಳುನಾಡೋಚ್ಛಾಯ 2017’: ಪೂರ್ವಭಾವಿ ಸಭೆ

Update: 2017-11-20 17:30 GMT

ದುಬೈ, ನ.20: ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಡಿಸೆಂಬರ್ 23 ಹಾಗು 24ರಂದು ನಡೆಸಲುದ್ದೇಶಿಸಿರುವ ‘ತುಳುನಾಡೋಚ್ಛಾಯ 2017’ ಕಾರ್ಯಕ್ರಮದ ಪೂರ್ವಭಾವಿ ಸಭೆ ದುಬೈಯ ಫೋರ್ಚುನ್ ಪ್ಲಾಝಾ ಹೋಟೆಲ್ ನಲ್ಲಿ ನಡೆಯಿತು. ಸಭೆಯಲ್ಲಿ ಯುಎಇಯಲ್ಲಿ ನೆಲೆಸಿರುವ ತುಳುವರು ಪಾಲ್ಗೊಂಡಿದ್ದರು.

ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶೋಧನ್ ಪ್ರಸಾದ್, ತುಳುವರು ತುಳುವರಿಗಾಗಿ ಹಮ್ಮಿಕೊಂಡಿರುವ ಪ್ರಮುಖ ಕಾರ್ಯಕ್ರಮವಾಗಿದೆ ‘ತುಳುನಾಡೋಚ್ಛಾಯ-2017”. ತುಳುನಾಡಿನ ಸಂಸ್ಕೃತಿ, ಕೆಲ, ಸಂಪ್ರದಾಯದ ಪ್ರಾಮುಖ್ಯತೆಯನ್ನು ಎತ್ತಿಹಿಡಿಯಲಿರುವ ಕಾರ್ಯಕ್ರಮವಾಗಿದೆ. ಪ್ರತಿಯೊಬ್ಬರೂ ಈ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಬೇಕು” ಎಂದರು.

ಇತ್ತೀಚೆಗಷ್ಟೇ ‘ಮಯೂರ ಗ್ಲೋಬಲ್ ಕನ್ನಡಿಗ ಅವಾರ್ಡ್ 2017’ನ್ನು ಗಳಿಸಿದ ಸರ್ವೋತ್ತಮ ಶೆಟ್ಟಿಯವರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ‘ವಿಶ್ವ ತುಳು ಆಯೊನೊ 2016’ರ ಯಶಸ್ಸಿನ ಬಗ್ಗೆ ವಿವರಿಸಿದರು.

ಇದೇ ಸಂದರ್ಭ ‘ತುಳುನಾಡೋಚ್ಛಾಯ 2017’ ಕಾರ್ಯಕ್ರಮದ ಅಧ್ಯಕ್ಷರನ್ನಾಗಿ ಫ್ರಾಂಕ್ ಫೆರ್ನಾಂಡಿಸ್ ರನ್ನು ಶೋಧನ್ ಶೆಟ್ಟಿ ಘೋಷಿಸಿದರು. ಕಾರ್ಯಕ್ರಮದಲ್ಲಿ ಬ್ಯಾರೀಸ್ ಕಲ್ಚರಲ್ ಫೋರಂ ಉಪಾಧ್ಯಕ್ಷ ಎಂ.ಇ.ಮೂಳೂರು, ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಸೇರಿದಂತೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭ ‘ಅಂತಾರಾಷ್ಟ್ರೀಯ ತುಳುನಾಡ ರಕ್ಷಣಾ ವೇದಿಕೆ’ಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಫ್ರಾಂಕ್ ಫೆರ್ನಾಂಡೀಸ್, ಅಧ್ಯಕ್ಷರಾಗಿ ಎಂ.ಎಸ್. ಹಿದಾಯತುಲ್ಲಾ ಅಡ್ಡೂರು, ಉಪಾಧ್ಯಕ್ಷರುಗಳಾಗಿ ಸುರೇಶ್ ಪೂಜಾರಿ, ನಿತ್ಯಾನಂದ ಬೆಸ್ಕೂರ್, ಅಜ್ಮಲ್ ಸೈಯದ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಭಂಡಾರಿ, ಜೊತೆ ಕಾರ್ಯದರ್ಶಿಯಾಗಿ ಲತಾ ಹೆಗ್ಡೆ, ಉವೈಝ್ ಚೌಗುಲೆ, ಉಮೇಶ್, ಖಜಾಂಚಿಯಾಗಿ ವಿನೋದ್ ಹಾಗು ಸಂಘಟನಾ ಕಾರ್ಯದರ್ಶಿಯಾಗಿ ಸುಚಿತ್ ನಾರಾಯಣ್ ಆಯ್ಕೆಯಾದರು.

ಯೂತ್ ವಿಂಗ್ ಅಧ್ಯಕ್ಷರಾಗಿ ಪ್ರೇಮ್ ಜೀತ್, ಪ್ರಧಾನ ಕಾರ್ಯದರ್ಶಿಯಾಗಿ ವಿಕ್ರಮ್, ಮಹಿಳಾ ವಿಂಗ್ ಅಧ್ಯಕ್ಷರಾಗಿ ರಜನಿ ಜಗದೀಶ್ ಅಮೀನ್, ಪ್ರಧಾನ ಕಾರ್ಯದರ್ಶಿಯಾಗಿ ಮಮತಾ ಕೋಟ್ಯಾನ್, ಗೌರವ ಸಲಹಾ ಸಮಿತಿಗೆ ಸರ್ವೋತ್ತಮ ಶೆಟ್ಟಿ, ಶೋಧನ್ ಪ್ರಸಾದ್, ಎಂ.ಇ. ಮೂಳೂರು ಆಯ್ಕೆಯಾದರು.

ಡಿಸೆಂಬರ್ 23 ಹಾಗು 24ರಂದು ನಡೆಯಲಿರುವ ‘ತುಳುನಾಡೋಚ್ಛಾಯ’ ಕಾರ್ಯಕ್ರಮದಲ್ಲಿ 2 ಲಕ್ಷಕ್ಕಿಂತಲೂ ಅಧಿಕ ತುಳುವರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News