ನೂರುಲ್ ಹುದಾ ಬರ್ ದುಬೈ ಸಮಿತಿ: ವಾರ್ಷಿಕ ಸಭೆ, ಪದಾಧಿಕಾರಿಗಳ ಆಯ್ಕೆ

Update: 2017-11-24 17:47 GMT

ದುಬೈ, ನ. 24: ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ ದುಬೈ ಸಮಿತಿಯ ಅದೀನದಲ್ಲಿ ನೂರುಲ್ ಹುದಾ ಬರ್ ದುಬೈ ಸಮಿತಿಯ ವಾರ್ಷಿಕ ಮತ್ತು ಪದಾಧಿಕರಿಗಳ ಆಯ್ಕೆ ಸಭೆಯು ಯೂಸುಫ್ ಈಶ್ವರಮಂಗಿಲ ಅವರ ಅಧ್ಯಕ್ಷತೆಯಲ್ಲಿ ಅಕಾಡೆಮಿ ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ ಉಸ್ತಾದರ ಉಪಸ್ತಿತಿಯಲ್ಲಿ ಇತ್ತೀಚೆಗೆ ಅಲ್ ಫರ್ಧಾನ್ ನಿವಾಸದಲ್ಲಿ ನಡೆಯಿತು.

ನೂರುಲ್ ಹುದಾ ಯುಎಇ ಸಮಿತಿಯ ಪ್ರಧಾನ ಕಾರ್ಯದರ್ಶಿ  ಅಬ್ದುಲ್ ಲತೀಫ್ ಕೌಡಿಚ್ಚಾರ್ ಸ್ವಾಗತಿಸಿದರು. ಕೆಐಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ   ಉದ್ಘಾಟಿಸಿ, ಮಾತನಾಡಿದರು.

ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು  ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ  ಮಾತನಾಡಿ ವಿದ್ಯಾ ಸಂಸ್ಥೆಯ ಅಭಿವೃದ್ಧಿ ಕಾರ್ಯಗಳಿಗೆ ಬೆನ್ನೆಲುಬಾಗಿ ಸಹಕರಿಸುವ ನೂರುಲ್ ಹುದಾ ಯುಎಇ ಮತ್ತು ಅದೀನ ಸಮಿತಿಗಳ ಕಾರ್ಯ ಚಟುವಟಿಕೆಗಳು ಶ್ರೇಷ್ಟವಾಗಿದೆ, ಸುಶಿಕ್ಷಿತ ಸಮುದಾಯವನ್ನು ರೂಪಿಸಲು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ನೂರುಲ್ ಹುದಾ ದುಬೈ ಸಮಿತಿಯ ಕಾರ್ಯದರ್ಶಿ ತಾಜು ಕೊಚ್ಚಿ ವಾರ್ಷಿಕ ವರದಿ ವಾಚಿಸಿದರು. ಬರ್ ದುಬೈ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಮೂಸ ಕುಂಞಿ ಕಾವು ಲೆಕ್ಕ ಪತ್ರ ಮಂಡಿಸಿದರು. ಬರ್ ದುಬೈ ಸಮಿತಿಯ ಗೌರವಾಧ್ಯಕ್ಷ ಯೂಸುಫ್ ಈಶ್ವರಮಂಗಿಲ, ಅನ್ವರ್ ಮಣಿಲ ಮಾತನಾಡಿದರು.

 ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು: ಗೌರವಾಧ್ಯಕ್ಷ: ಅಶ್ರಫ್ ಆರ್ತಿಗೆರೆ, ಅಧ್ಯಕ್ಷ : ಯೂಸುಫ್ ಈಶ್ವರಮಂಗಿಲ, ಪ್ರಧಾನ ಕಾರ್ಯದರ್ಶಿ : ಮೂಸ ಕುಂಞಿ ಕಾವು, ಕೋಶಾಧಿಕಾರಿ : ಶಾಫಿ ಅಜ್ಜಾವರ, ಉಪಾಧ್ಯಕ್ಷರುಗಳಾಗಿ : ಹಮೀದ್ ಕೊರಿಂಗಿಲ, ಮುಹಮ್ಮದ್ ಪೈವಳಿಕೆ, ಅಬ್ದುಲ್ಲಾ ಕೊಚ್ಚಿ, ರಶೀದ್ ತ್ರಿಕರಿಪೂರ್, ಕಾರ್ಯದರ್ಶಿಗಳು : ಶಬೀರ್ ಮೆಲ್ಕಾರ್, ಬಷೀರ್ ಪಳ್ಳತಪಾಡಿ, ಶಂಶುದ್ದೀನ್ ಅಜ್ಜಾವರ, ಸಂಘಟನಾ ಕಾರ್ಯದರ್ಶಿಗಳು : ತಾಜು ಕೊಚ್ಚಿ, ಸಲಹೆಗಾರರು: ಫೈಝಲ್ ರಹ್ಮಾನಿ ಬಾಯಾರ್, ಅಶ್ರಫ್ ಶಾ ಮಾಂತೂರು, ಸಂಚಾಲಕರು : ಸಲೀಂ ಬರೆಪ್ಪಾಡಿ, ಅಲೀ ಪಳ್ಳಪಾಡಿ, ಹಂಝ ಪುಣಚ, ಫಯಾಝ್ ಅಜ್ಜಾವರ, ಅಬ್ದುಲ್ ಲತೀಫ್ ಕೂರ್ನಡ್ಕ, ಅಶ್ರಫ್ ಮಾಡನ್ನೂರು, ಝೈನುದ್ದೀನ್ ಎಸ್ ಎಮ್., ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ : ಶಾದಿಕ್ ಸುಣ್ಣಮೂಲೆ, ಆರಿಸ್ ನಾಟೆಕಲ್ಲ್, ಉಮ್ಮರ್ ಅಜ್ಜಾವರ, ಶಂಶುದ್ದೀನ್ ಮಲಪ್ಪುರ, ಸಫೀದ್ ಮಲಪ್ಪುರ, ಖಲೀಲ್ ಮಂಜೇಶ್ವರ, ಹಂಝ ಮಲಪ್ಪುರ, ಫಾರೂಕ್ ಮಲಪ್ಪುರ, ಶಾಫಿ ಒಳತಡ್ಕ ಮೊದಲಾದವರನ್ನು ಆಯ್ಕೆ ಮಾಡಲಾಯಿತು.

ನೂರುಲ್ ಹುದಾ ದುಬೈ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಝೀಝ್ ಸೋಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಲೆಕ್ಕ ಪರಿಶೋಧಕ ಅಶ್ರಫ್ ಪರ್ಲಡ್ಕ  ನೂತನ ಸಮಿತಿಗೆ ಶುಭ ಹಾರೈಸಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News