ಕರ್ನಾಟಕ ಕಲ್ಚರಲ್ ಫೌಂಡೇಶನ್: ನೂತನ ತುರೈಫ್ ಸೆಕ್ಟರ್ ರಚನೆ

Update: 2017-11-24 17:52 GMT

ಸೌದಿ ಅರೇಬಿಯಾ, ನ. 24: ಕರ್ನಾಟಕ ಕಲ್ಚರಲ್ ಫೌಂಡೇಶನ್ ಮದೀನಾ ಝೋನಲ್ ಅಧೀನದಲ್ಲಿ ನೂತನ ತುರೈಫ್ ಸೆಕ್ಟರ್ ರಚನೆ ಹಾಗೂ ದುವಾ ಮಜ್ಲಿಸ್ ಕಾರ್ಯಕ್ರಮ ತುರೈಫ್ ನಲ್ಲಿ ನಡೆಯಿತು.  ಕೆಸಿಎಫ್ ಮದೀನಾ ಝೋನಲ್ ಅಧ್ಯಕ್ಷ ಫಾರೂಕ್ ನಈಮಿ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು.

ಚುನಾವಣಾಧಿಕಾರಿಯಾಗಿದ್ದ ಮದೀನಾ ಝೋನಲ್ ಕಾರ್ಯದರ್ಶಿ ಶುಕೂರ್ ನಾಳ ನೂತನ ತುರೈಫ್ ಸೆಕ್ಟರ್ ಪದಾಧಿಕಾರಿಗಳನ್ನು ನೇಮಕಗೊಳಿಸಿದರು.

ನೂತನ ತುರೈಫ್ ಸೆಕ್ಟರ್ ಅಧ್ಯಕ್ಷರಾಗಿ ಅಸ್ಲಂ ಶೃಂಗೇರಿ ಹಾಗೂ ಕಾರ್ಯದರ್ಶಿ ಯಾಗಿ ಸಿನಾನ್ ಕನ್ನಂಗಾರ್ ಅವರನ್ನು ನೇಮಿಸಲಾಯಿತು.
ಖಜಾಂಜಿ ಫಾರೂಕ್ ವಿಟ್ಲ, ಆರ್ಗನೈಸಿಂಗ್ ವಿಭಾಗದ ಅಧ್ಯಕ್ಷರಾಗಿ ಝಹೀರ್ ಪಡುಬಿದ್ರೆ, ರಿಲೀಫ್ ವಿಂಗ್ ಅಧ್ಯಕ್ಷ ರಾಗಿ ಮನ್ಸೂರ್, ಕಚೇರಿ ವಿಭಾಗದ ಅಧ್ಯಕ್ಷರಾಗಿ
ಝುನೈದ್ ಉಡುಪಿ ಹಾಗೂ ಪಬ್ಲಿಕೇಷನ್ ವಿಂಗ್ ಅಧ್ಯಕ್ಷರಾಗಿ  ಮುಸ್ತಫಾ ಕಾರ್ನಾಡ್ ಅವರನ್ನು ನೇಮಕಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮದೀನಾ ಝೋನಲ್ ಆರ್ಗನೈಸೇಶನ್ ವಿಭಾಗದ ಅಧ್ಯಕ್ಷ ತಾಜುದ್ದೀನ್ ಸುಳ್ಯ ಅವರು ನೂತನ ಪದಾಧಿಕಾರಿಗಳಿಗೆ ಗಲ್ಫ್ ಇಶಾರ ಮಾಸಪತ್ರಿಕೆ ಹಸ್ತಾಂತರಿಸಿದರು. 

ಮದೀನಾ ಝೋನಲ್ ಕಾರ್ಯದರ್ಶಿ ಶುಕೂರ್ ನಾಳ ಕಾರ್ಯಕ್ರಮ ನಿರೂಪಿಸಿದರು. ಈ ವೇಳ ಮದೀನಾ ಝೋನಲ್ ನಾಯಕರಾದ ಹೈದರ್ ಪಡಿಕ್ಕಲ್, ರಿಯಾಝ್ ಭಟ್ಕಳ, ನೂತನ ತುರೈಫ್ ಸೆಕ್ಟರ್ ಅಧ್ಯಕ್ಷ ಅಸ್ಲಂ ಶೃಂಗೇರಿ , ಕಾರ್ಯದರ್ಶಿ ಸಿನಾನ್ ಕನ್ನಂಗಾರ್,  ಖಜಾಂಜಿ ಫಾರೂಕ್ ವಿಟ್ಲ, ಮತ್ತಿರರು ಉಪಸ್ಥಿತರಿದ್ದರು.

Writer - ಹಕೀಂ ಬೋಳಾರ್

contributor

Editor - ಹಕೀಂ ಬೋಳಾರ್

contributor

Similar News