ಸೌದಿ: 82,852 ವಾಸ್ತವ್ಯ ಉಲ್ಲಂಘನಕಾರರ ಬಂಧನ

Update: 2017-11-29 17:41 GMT

ರಿಯಾದ್, ನ. 29: ಸೌದಿ ಅರೇಬಿಯದಲ್ಲಿ ಇತ್ತೀಚೆಗೆ ನಡೆದ ದಾಳಿಯ ವೇಳೆ, 82,852 ವಾಸ್ತವ್ಯ ಮತ್ತು ಉದ್ಯೋಗ ನಿಯಮಗಳ ಉಲ್ಲಂಘನಕಾರರನ್ನು ಬಂಧಿಸಲಾಗಿದೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ದಾಳಿಯ ವೇಳೆ 46,824 ಇಕಾಮ (ವಾಸ್ತವ್ಯ) ನೀತಿ ಉಲ್ಲಂಘನಕಾರರು, 15,569 ಗಡಿ ಸುರಕ್ಷತೆ ಉಲ್ಲಂಘನಕಾರರು ಮತ್ತು 20,459 ಉದ್ಯೋಗ ನಿಯಮ ಉಲ್ಲಂಘನಕಾರರನ್ನು ಪತ್ತೆಹಚ್ಚಲಾಗಿದೆ.

ಅದೇ ವೇಳೆ, ಸೌದಿ ಅರೇಬಿಯದ ಗಡಿ ಪ್ರವೇಶಿಸಲು ಯತ್ನಿಸಿದ 1,074 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ 80 ಶೇಕಡ ಮಂದಿ ಯಮನ್ ಪ್ರಜೆಗಳು, 18 ಶೇಕಡ ಮಂದಿ ಇಥಿಯೋಪಿಯನ್ನರು ಹಾಗೂ ಉಳಿದ 2 ಶೇಕಡ ಮಂದಿ ವಿವಿಧ ದೇಶಗಳ ಪ್ರಜೆಗಳು.

ಗಡಿ ದಾಟಲು ಯತ್ನಿಸಿದ ಸುಮಾರು 564 ಮಂದಿಯನ್ನು ಗಡಿಪಾರು ಮಾಡಲಾಗಿದೆ. ಅದೇ ವೇಳೆ, ಸೌದಿ ಅರೇಬಿಯದಿಂದ ಅಕ್ರಮವಾಗಿ ಗಡಿ ದಾಟಲು ಯತ್ನಿಸುತ್ತಿದ್ದ 18 ಮಂದಿಯನ್ನು ಹಿಡಿಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News