ಫೆಲೆಸ್ತೀನ್‌ಗೆ ‘ಸಂಪೂರ್ಣ ಬೆಂಬಲ’ ವ್ಯಕ್ತಪಡಿಸಿದ ಸೌದಿ

Update: 2017-12-01 17:10 GMT

ರಿಯಾದ್, ಡಿ. 1: ಸೌದಿ ಅರೇಬಿಯವು ವಿಶ್ವಸಂಸ್ಥೆಯಲ್ಲಿ ಗುರುವಾರ ಫೆಲೆಸ್ತೀನ್ ಜನರಿಗೆ ‘ದೃಢ ಬೆಂಬಲ ಮತ್ತು ಸಂಪೂರ್ಣ ಸಹಮತ’ ವ್ಯಕ್ತಪಡಿಸಿದೆ ಎಂದು ಸೌದಿ ಪ್ರೆಸ್ ಏಜನ್ಸಿ (ಎಸ್‌ಪಿಎ) ವರದಿ ಮಾಡಿದೆ.

ವಿಶ್ವಸಂಸ್ಥೆಯಲ್ಲಿ ಸೌದಿ ಅರೇಬಿಯದ ಭಾಷಣವನ್ನು ವಿಶ್ವಸಂಸ್ಥೆಗೆ ಸೌದಿ ಅರೇಬಿಯದ ಖಾಯಂ ನಿಯೋಗದ ರಾಜಕೀಯ ಸಮನ್ವಯಕಾರಿಣಿ ಮನಲ್ ಹಸನ್ ರಡ್ವನ್ ಮಾಡಿದರು.

 ‘‘1967ರಿಂದಲೂ ಆಕ್ರಮಣಕ್ಕೆ ಒಳಗಾಗಿರುವ ಸಮಗ್ರ ಭೂಭಾಗಗಳನ್ನು ಒಟ್ಟು ಸೇರಿಸಿ ಸ್ವತಂತ್ರ ಹಾಗೂ ಸಾರ್ವಭೌಮ ಫೆಲೆಸ್ತೀನ್ ರಾಷ್ಟ್ರದ ನಿರ್ಮಾಣವಾಗಬೇಕು’’ ಎಂದು ಅವರು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News