ಸೌದಿಯಲ್ಲಿ 100 ದೇಶಗಳ 1.1 ಕೋಟಿ ಕೆಲಸಗಾರರು

Update: 2017-12-01 17:58 GMT

ರಿಯಾದ್, ಡಿ. 1: ಸೌದಿ ಅರೇಬಿಯವು ಜಗತ್ತಿನ ಅತಿ ದೊಡ್ಡ ಕಾರ್ಮಿಕ ಮಾರುಕಟ್ಟೆಯಾಗಿದೆ ಹಾಗೂ ಅಲ್ಲಿ 100ಕ್ಕೂ ಅಧಿಕ ದೇಶಗಳ ಸುಮಾರು 1.1 ಕೋಟಿ ವಿದೇಶೀಯರು ಕೆಲಸ ಮಾಡುತ್ತಿದ್ದಾರೆ ಎಂದು ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಅದ್ನಾನ್ ಬಿನ್ ಅಬ್ದುಲ್ಲಾ ಅಲ್-ನಯೀಮ್ ಹೇಳಿದ್ದಾರೆ.

ಅವರು ಮಂಗಳವಾರ ಕೌನ್ಸಿಲ್ ಆಫ್ ಸೌದಿ ಚೇಂಬರ್‌ನಲ್ಲಿ ಸೌದಿ ನೇಮಕಾತಿ ದಲ್ಲಾಳಿಗಳು ಮತ್ತು ಕೊಲಂಬೊದಿಂದ ಬಂದ 32 ಸದಸ್ಯರ ನಿಯೋಗವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

‘ಸೌದಿ 2030ರ ಮುನ್ನೋಟ’ದ ಪ್ರಕಾರ, ಸೌದಿ ಕಾರ್ಮಿಕ ಮಾರುಕಟ್ಟೆಯನ್ನು ವಿದೇಶಿ ಕೆಲಸಗಾರರಿಗೆ ಹೆಚ್ಚು ಆಕರ್ಷಣೀಯವಾಗಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ನಯೀಮ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News