ಎಎಫ್ಎಸ್‌ ಮಂಗಳೂರು ಮಡಿಲಿಗೆ ‘ಸ್ಪಾರ್ಟನ್ ಪ್ರೀಮಿಯರ್ ಲೀಗ್ ಜೆದ್ದಾ ಸೀಸನ್ 1’ ಟ್ರೋಫಿ

Update: 2017-12-07 16:31 GMT

ಜಿದ್ದಾ, ಡಿ.7: ಸೌದಿ ಅರೆಬಿಯಾ ಜಿದ್ದಾದ ಸುಲೈಮಾನಿಯಾ ಕ್ರೀಡಾಂಗಣದಲ್ಲಿ ಡಿಸೆಂಬರ್ 1ರಂದು ನಡೆದ ‘ಸ್ಪಾರ್ಟನ್ ಪ್ರೀಮಿಯರ್ ಲೀಗ್ ಜೆದ್ದಾ ಸೀಸನ್ 1’ ರಲ್ಲಿ ಎಎಫ್‌ಎಸ್ ಮಂಗಳೂರು ತಂಡ ಕೆಸಿಸಿ ಹೈದರಾಬಾದ್ ತಂಡವನ್ನು ಮಣಿಸಿ ಭರ್ಜರಿ ಜಯ ಸಾಧಿಸಿದೆ.

ಫೈನಲ್ ಪಂದ್ಯಾಕೂಟದ ಟಾಸ್ ಜಯಿಸಿದ ಎಎಫ್‌ಎಸ್ ಮಂಗಳೂರು ಮೊದಲು ಬ್ಯಾಟಿಂಗ್ ಆಯ್ದುಕೊಂಡು, ರಫ್ಕತ್ ಆಲಿ ಅವರ ಸ್ಪೋಟಕ 101 ರನ್(36 ಎಸೆತಗಳಲ್ಲಿ) ಗಳ ಸಹಾಯದಿಂದ 10 ಓವರ್‌ಗಳಲ್ಲಿ 2 ವಿಕೆಟ್ ಕಳೆದು ಕೊಂಡು 138ರನ್ ಕಲೆ ಹಾಕಿತ್ತು.

ಬಳಿಕ ಬ್ಯಾಟಿಂಗ್ ಮಾಡಿದ ಕೆಸಿಸಿ ಹೈದರಾಬಾದ್ ತಂಡ 10 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದು ಕೊಂಡು 91 ರನ್‌ಗಳನ್ನು ಮಾತ್ರ ಪೇರಿಸುವಲ್ಲಿ ಸಫಲವಾಗಿ ಸೋಲೊಪ್ಪಿಕೊಂಡಿತು.

ಈ ಮೂಲಕ 47 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದ ಎಎಸ್‌ಎಫ್ ಮಂಗಳೂರು 6 ಸಾವಿರ ಸೌದಿ ರಿಯಾಲ್ ನಗದು ಪುರಸ್ಕಾರ ಹಾಗೂ ‘ಸ್ಪಾರ್ಟನ್ ಪ್ರೀಮಿಯರ್ ಲೀಗ್ ಜೆದ್ದಾ ಸೀಸನ್ 1’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಕೇವಲ 36ಎಸೆತಗಳಲ್ಲಿ 13 ಸಿಕ್ಸರ್‌ಗಳ ನೆರವಿನೀಂದ 101 ರನ್ ಕಲೆಹಾಕಿದ ರಫ್ಕತ್ ಅಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಎಲ್‌ಎಇಡಿ ಟಿವಿ ಪಡೆದು ಕೊಂಡರೆ, ಅಝಾಂ, ಐಫೋನ್ ಮತ್ತು ಎಲ್‌ಇಡಿ ಪಡೆಯುವ ಮೂಲಕ ಸರಣಿ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಪ್ರಶಸ್ತಿ ಸ್ವೀಕರಿಸುವ ಸಂದರ್ಭ ಎಎಸ್‌ಎಫ್ ಮಂಗಳೂರು ತಂಡದ ಮಾಲಕ ರಿಯಾಝ್ ಕಲ್ಲಾಪು ಹಳೆಯಂಗಡಿ, ತಂಡದ ನಾಯಕ ಅಕ್ಬರ್ ಬೊಳೈ, ಉಪ ನಾಯಕರಾದ ಲತೀಫ್ ಪಡುಬಿದ್ರೆ, ಸಂಶುದ್ದೀನ್ ಉಚ್ಚಿಲ, ಮ್ಯಾನೇಜರ್, ಸಲೀಮ್, ಸ್ಪಾರ್ಟನ್ ಗ್ರೂಪ್‌ನ ಮಾಲಕರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News