ಸೌದಿಯಾದ್ಯಂತ 1.60 ಲಕ್ಷ ಕಾನೂನು ಉಲ್ಲಂಘಕರ ಬಂಧನ

Update: 2017-12-09 16:40 GMT

ರಿಯಾದ್ (ಸೌದಿ ಅರೇಬಿಯ), ಡಿ. 9: ರಾಷ್ಟ್ರವ್ಯಾಪಿ ದಾಳಿಯಲ್ಲಿ ಸುಮಾರು 1.60 ಲಕ್ಷ ವಾಸ್ತವ್ಯ, ಕೆಲಸ ಮತ್ತು ಗಡಿ ಭದ್ರತಾ ವ್ಯವಸ್ಥೆಗಳ ಉಲ್ಲಂಘಕರನ್ನು ಬಂಧಿಸಲಾಗಿದೆ ಎಂದು ಸಾರ್ವಜನಿಕ ಸುರಕ್ಷತೆಯ ಮಹಾ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ.

ಕಾನೂನು ಉಲ್ಲಂಘಕರನ್ನು ಪತ್ತೆಹಚ್ಚಿ ಬಂಧಿಸಲು ನವೆಂಬರ್ ಆರಂಭದಿಂದ ದೇಶವ್ಯಾಪಿ ಕಾರ್ಯಾಚರಣೆ ನಡೆಸಲಾಗಿತ್ತು.

ಒಟ್ಟು 1,59,407 ಉಲ್ಲಂಘಕರನ್ನು ಬಂಧಿಸಲಾಗಿದ್ದು, ಆ ಪೈಕಿ 89,651 ವಾಸ್ತವ್ಯ ನಿಯಮಗಳ ಉಲ್ಲಂಘಕರು, 45,063 ಕಾರ್ಮಿಕ ನಿಯಮಗಳ ಉಲ್ಲಂಘಕರು ಹಾಗೂ 24,693 ಗಡಿ ಭದ್ರತೆ ವ್ಯವಸ್ಥೆಗಳ ಉಲ್ಲಂಘಕರಾಗಿದ್ದಾರೆ ಎಂದು ನಿರ್ದೇಶನಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News