ದಾರುನ್ನೂರ್ ಶಾರ್ಜಾ ಸ್ಟೇಟ್ ಸಮಿತಿ ರಚನೆ, ಮೌಲಿದ್ ಪಾರಾಯಣ

Update: 2017-12-09 18:28 GMT

ದುಬೈ, ಡಿ. 9: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡಬಿದ್ರಿ ಇದರ ಯು ಎ ಇ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ದಾರುನ್ನೂರ್ ಶಾರ್ಜಾ ಸ್ಟೇಟ್ ಸಮಿತಿಯನ್ನು ರಚಿಸಲಾಯಿತು.

ರಬೀವುಲ್ ಅವ್ವಲ್ ತಿಂಗಳ ವೈಶಿಷ್ಟ್ಯತೆಯನ್ನು ಪ್ರತಿಬಿಂಬಿಸುವ ಮುತ್ತು ನೆಬಿ ಜನ್ಮ ದಿನಾಚರಣೆಯ ಅಂಗವಾಗಿ  ದಾರುನ್ನೂರ್  ಉಸ್ತಾದ್ ಶರೀಫ್ ಅಶ್ರಫಿ  ಮಡಂತ್ಯಾರ್ ರವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಿತು.

ದಾರುನ್ನೂರ್ ಯು ಎ ಇ ಅಧ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆ ಅಧ್ಯಕ್ಷತೆ ವಹಿಸಿದರು.  ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ದಾರುನ್ನೂರ್ ಕೇಂದ್ರ ಸಮಿತಿ ಮಂಗಳೂರು ಇದರ  ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯ,  ದಾರುನ್ನೂರ್ ಯು ಎ ಇ ಸಲಹೆಗಾರ ಮತ್ತು ಮಸ್ಜಿದ್ ಬಹ್ರ್ ಅನ್ನೂರ್ ಇದರ ಸಂಶುದ್ದೀನ್ ವಳಪಟ್ಟಣಂ,  ದಾರುನ್ನೂರ್ ಯು ಎ ಇ  ಪ್ರಧಾನ ಕಾರ್ಯದರ್ಶಿ  ಬದ್ರುದ್ದೀನ್ ಹೆಂತಾರ್ ,ದಾರುನ್ನೂರ್ ದುಬೈ ಸ್ಟೇಟ್ ಅಧ್ಯಕ್ಷ  ಮಹಮ್ಮದ್ ರಫೀಕ್ ಆತೂರು, ದುಬೈ ಸ್ಟೇಟ್  ಪ್ರಧಾನ  ಕಾರ್ಯದರ್ಶಿ  ಉಸ್ಮಾನ್ ಕೆಮ್ಮಿಂಜೆ, ದುಬೈ ಸ್ಟೇಟ್  ಕೋಶಾಧಿಕಾರಿ  ಮಹಮ್ಮದ್ ಹನೀಫ್ ಕೆ.ಪಿ ಮೂಡಬಿದ್ರಿ, ರಾಷ್ಟ್ರೀಯ ಸಮಿತಿ ಪ್ರಮುಖ  ಸಂಶುದ್ದೀನ್ ಹಮೀದ್ ಮೂಡಬಿದ್ರಿ, ಉಸ್ತಾದ್ ಅಬ್ದುಲ್ ರಹ್ಮಾನ್ ಲತೀಫಿ ಕಾಸರಗೋಡ್,  ಇ ಆರ್ ಮುಹಮ್ಮದ್ ಕುಂಞ ಹಾಜಿ ಕಾಸರಗೋಡ್ ಕೋಶಾಧಿಕಾರಿ ಯಸ್ ಕೆ ಯಸ್ ಯಸ್ ಯಫ್ ಕಾಸರಗೋಡ್,  ಸಅದ್ ವೆಳಿಯಾಡ್ , ಪ್ರಧಾನ ಕಾರ್ಯದರ್ಶಿ ಯಸ್ ಕೆ ಯಸ್ ಯಸ್ ಯಫ್ ಕಾಸರಗೋಡ್ ಮೊದಲಾದವರು ಉಪಸ್ಥಿತರಿದ್ದರು.

 ಸಾಜಿದ್ ಬಜ್ಪೆ ಸ್ವಾಗತಿಸಿದರು.  ಸಂಶುದ್ದೀನ್ ವಳಪಟ್ಟಣಂ ಉದ್ಘಾಟಿಸಿದರು.

ಬದ್ರುದ್ದೀನ್ ಹೆಂತಾರ್ ದಾರುನ್ನೂರ್  ಪರಿಚಯ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ವಿವರಿಸಿದರು.

2017-18 ರ ಸಾಲಿಗೆ ಶಾರ್ಜಾ ಸ್ಟೇಟ್ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಉಪದೇಶಕ ಸಮಿತಿ:  ಸಯ್ಯದ್ ಆಸ್ಕರ್ ಅಲಿ  ತಂಙಳ್ ಕೋಲ್ಪೆ, ಸಯ್ಯದ್ ಶಿಹಾಬ್ ತಂಙಳ್ ಬಿ.ಸಿ ರೋಡ್,  ಇಕ್ಬಾಲ್ ಬಾವ ಬಂಟ್ವಾಳ್,  ಅಬ್ದುಲ್ ಖಾದರ್ ಬೈತಡ್ಕ, ಯೂಸುಫ್ ಬೇರಿಕೆ,  ಅಡ್ವೋಕೇಟ್ ಇಬ್ರಾಹಿಂ ಖಲೀಲ್,  ಹುಮಾಯೂನ್ ಬಜ್ಪೆ,  ಜಬ್ಬಾರ್ ಎಡನೀರ್, ಗೌರವಾಧ್ಯಕ್ಷರಾಗಿ  ಸಂಶುದ್ದೀನ್ ವಳಪಟ್ಟಣಂ, ಅಧ್ಯಕ್ಷರಾಗಿ ಸಂಶುದ್ದೀನ್ ಸೂರಲ್ಪಾಡಿ, ಉಪಾಧ್ಯಕ್ಷರಾಗಿ  ಅಬ್ದುಲ್ ರಝಾಕ್ ಸೋಂಪಾಡಿ,  ಅಕ್ಬರ್ ಮಣಿಹಳ್ಳ ಬಂಟ್ವಾಳ, ಉಸ್ತಾದ್ ಅಬ್ದುಲ್ ರಹ್ಮಾನ್ ಲತೀಫಿ ಕಾಸರಗೋಡ್,  ಸಾಜಿದ್ ಬಜ್ಪೆ, ಪ್ರಧಾನ ಕಾರ್ಯದರ್ಶಿ  ಸಫಾ ಇಸ್ಮಾಯಿಲ್ ಬಜ್ಪೆ, ಅಡ್ಮಿನ್ ಕಾರ್ಯದರ್ಶಿಯಾಗಿ   ಇಸ್ಮಾಯೀಲ್ ತೋಡಾರ್, ಕಾರ್ಯದರ್ಶಿಯಾಗಿ ಖಯ್ಯೂಮ್ ಅಗ್ರಹಾರ,  ಸಿದ್ದೀಕ್ ಅಗ್ರಹಾರ,  ಮುಝೈನ್ ಬಿಕರ್ಣಕಟ್ಟೆ, ಕೋಶಾಧಿಕಾರಿಯಾಗಿ ನಸೀರ್ ಸುರತ್ಕಲ್, ಸಹ ಕೋಶಾಧಿಕಾರಿಯಾಗಿ  ರವೂಫ್ ಕಣ್ಣಂಗಾರ್, ಸಂಘಟನೆ ಕಾರ್ಯದರ್ಶಿಯಾಗಿ ಮಹಮ್ಮದ್ ರಫೀಕ್ ಸುರತ್ಕಲ್, ಲೆಕ್ಕ ಪರಿಶೋಧಕರಾಗಿ ಮುಸ್ತಾಕ್ ಮಹಮ್ಮದ್ ತೋಡಾರ್, ಸಹ ಲೆಕ್ಕ ಪರಿಶೋಧಕರಾಗಿ  ಮುಶ್ರಿಫ್ ತೋಡಾರ್, ಕನ್ವೀನರ್ ಗಳಾಗಿ ಜಲೀಲ್ ನೀಲೇಶ್ವರ್, ಯಾಸಿರ್ ಕಕ್ಕಿಂಜೆ,  ಸುಹೈಲ್ ಚೊಕ್ಕಬೆಟ್ಟು,  ಅಬ್ದುಲ್ ಸಲಾಂ ನೀಲೇಶ್ವರ್,  ಅಕ್ಬರ್ ಅಗ್ರಹಾರ,  ಅಶ್ರಫ್ ಉಸ್ತಾದ್ ಕಾಸರಗೋಡ್,  ನವಾಝ್ ಉಡುಪಿ, ರಿಯಾಝ್ ಕುಲಾಯಿ,  ಮುನೀರ್ ನೀಲೇಶ್ವರ್, ಕಮರುದ್ದೀನ್ ಗುರುಪುರ, ಮನ್ಸೂರ್ ಸೂರಲ್ಪಾಡಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ  ನವಾಝ್ ಜೋಕಟ್ಟೆ,  ನವಾಝ್ ಕೂಳೂರ್,  ಅಶ್ರಫ್ ಬಜ್ಪೆ,  ಆಸಿಫ್ ಬಂಟ್ವಾಳ್,  ಸಮೀರ್ ಬಂಟ್ವಾಳ್,  ನವಾಝ್ ತೋಡಾರ್,  ಹಬೀಬ್ ಮೂಡಬಿದ್ರಿ,  ಆಸಿಫ್ ಮಂಜೇಶ್ವರ್,  ಸದಫ್ ಸಾದಿಕ್ ಕಾಪು,  ಅಬ್ಬಾಸ್ ಚಿಕ್ಕಮಗಳೂರು,  ಸಮೀರ್ ಉಜಿರೆ,  ಸಫ್ವಾನ್ ಬಲ್ಮಟ್ಟ,  ಫೈಝಲ್ ಮೂಡಬಿದ್ರಿ ಆಯ್ಕೆಮಾಡಲಾಯಿತು.

ದಾರುನ್ನೂರ್ ವತಿಯಿಂದ ವರ್ಷಂಪ್ರತಿ  ಆಚರಿಸಿಕೊಂಡು ಬರುವ ಬೃಹತ್ ಮೀಲಾದ್ ಕಾರ್ಯಕ್ರಮವನ್ನು ಈ ವರ್ಷವೂ ಡಿ.15ರಂದು ದೇರಾ ಪರ್ಲ್ ಕ್ರೀಕ್ ಹೋಟೆಲ್ ನಲ್ಲಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

 ನಸೀರ್ ಸುರತ್ಕಲ್  ವಂದಿಸಿದರು.  ಸಫಾ ಇಸ್ಮಾಯೀಲ್ ಬಜ್ಪೆ  ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News