ಡಿ. 15: ದುಬೈಯಲ್ಲಿ ಮಂಖೂಸ್ ಮೌಲಿದ್ ಕನ್ನಡ ವ್ಯಾಖ್ಯಾನ ಗ್ರಂಥ ಬಿಡುಗಡೆ

Update: 2017-12-13 17:12 GMT

ದುಬೈ, ಡಿ. 13:  ಹಿರಿಯ ವಿದ್ವಾಂಸ, ಖ್ಯಾತ ಬರಹಗಾರ, ಮೌಲಾನಾ ಎಸ್ ಪಿ ಹಂಝ ಸಖಾಫಿ ವಿರಚಿತ ಪ್ರವಾದಿ ಮುಹಮ್ಮದ್ ಮುಸ್ತಫ (ಸ ಅ) ರವರ ಕೀರ್ತನೆಗಳನ್ನೊಳಗೊಂಡ ಪ್ರಸಿದ್ಧ ಮೌಲಿದ್ ಗ್ರಂಥ 'ಮಂಖೂಸ್ ಮೌಲಿದ್' ಇದರ ಕನ್ನಡ ಅರ್ಥ ಮತ್ತು ವ್ಯಾಖ್ಯಾನ ಗ್ರಂಥವನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ - ಕೆಸಿಎಫ್ ಯುಎಇ ಸಮಿತಿಯ ಸಹಯೋಗದಲ್ಲಿ ಡಿ.15ರಂದು ದುಬೈನಲ್ಲಿ ಲೋಕಾರ್ಪಣೆಗೊಳ್ಳಲಿದೆ. 

ಬರ್ ದುಬೈಯಲ್ಲಿರುವ ಅಲ್ ಫಹೀದಿ ಮೆಟ್ರೋ ಸ್ಟೇಷನ್ ಸಮೀಪದ ಅಲ್ ಮುಸಲ್ಲಾ ಟವರ್ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಸೈಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ (ಕಿಲ್ಲೂರ್ ತಂಙಳ್) ರವರು ಬಿಡುಗಡೆಗೊಳಿಸಲಿದ್ದಾರೆ.

ರಾಜ್ಯ ಎಸ್ ವೈ ಎಸ್ ಅಧ್ಯಕ್ಷ ಜಿ ಎಂ ಮುಹಮ್ಮದ್ ಕಾಮಿಲ್ ಸಖಾಫಿ,  ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ, ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜಿ ಶೈಖ್ ಬಾವಾ ಮಂಗಳೂರು, ಸಂಘಟನಾ ಕನ್ವಿನರ್ ಪಿ ಎಂ ಅಬ್ದುಲ್ ಹಮೀದ್ (ಪಿಎಂಹೆಚ್) ಸೇರಿದಂತೆ ಉಲಮಾಗಳು, ಸಾಮಾಜಿಕ ನಾಯಕರುಗಳು, ಯುಎಇಯ ಹಿರಿಯ ಉದ್ಯಮಿಗಳು ಭಾಗವಹಿಸಲಿದ್ದಾರೆ ಎಂದು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಕಾಜೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News