ಟ್ರಕ್, ಬೈಕ್‌ಗಳನ್ನೂ ಮಹಿಳೆಯರು ಚಲಾಯಿಸಬಹುದು: ಸೌದಿ ಮಹಾ ಸಾರಿಗೆ ನಿರ್ದೇಶನಾಲಯ

Update: 2017-12-16 15:54 GMT

ರಿಯಾದ್ (ಸೌದಿ ಅರೇಬಿಯ), ಡಿ. 16: ಸೌದಿ ಅರೇಬಿಯದ ಮಹಿಳೆಯರು ಟ್ರಕ್ ಮತ್ತು ಮೋಟರ್ ಸೈಕಲ್‌ಗಳನ್ನೂ ಚಲಾಯಿಸಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಮಹಿಳೆಯರ ವಾಹನ ಚಾಲನೆ ಮೇಲಿದ್ದ ನಿಷೇಧವನ್ನು ತೆರವುಗೊಳಿಸುವ ಸೌದಿ ದೊರೆಯ ಐತಿಹಾಸಿಕ ಆದೇಶ ಹೊರಬಿದ್ದ ಮೂರು ತಿಂಗಳ ಬಳಿಕ ಈ ಹೆಚ್ಚುವರಿ ಮಾಹಿತಿ ಹೊರಬಿದ್ದಿದೆ.

ಸೌದಿ ಅರೇಬಿಯದಲ್ಲಿ ಈಗ ನಡೆಯುತ್ತಿರುವ ಸುಧಾರಣೆಯ ಭಾಗವಾಗಿ ಮುಂದಿನ ವರ್ಷದ ಜೂನ್‌ನಿಂದ ಮಹಿಳೆಯರು ವಾಹನಗಳನ್ನು ಚಲಾಯಿಸಬಹುದಾಗಿದೆ ಎಂಬುದಾಗಿ ಸೆಪ್ಟಂಬರ್‌ನಲ್ಲಿ ಹೊರಡಿಸಿದ ಆದೇಶದಲ್ಲಿ ದೊರೆ ಸಲ್ಮಾನ್ ಹೇಳಿದ್ದರು.

‘‘ಹೌದು, ನಾವು ಮಹಿಳೆಯರಿಗೆ ಮೋಟರ್ ಸೈಕಲ್‌ಗಳನ್ನು ಓಡಿಸಲು ಹಾಗೂ ಟ್ರಕ್‌ಗಳನ್ನೂ ಚಲಾಯಿಸಲು ಅಧಿಕಾರ ನೀಡುತ್ತಿದ್ದೇವೆ. ವಾಹನ ಚಾಲನೆ ಕುರಿತ ಕಾನೂನು ಪುರುಷ ಮತ್ತು ಮಹಿಳೆಯರಿಬ್ಬರಿಗೂ ಸಮಾನ ಎಂಬುದಾಗಿ ನೂತನ ಕಾನೂನು ಹೇಳುತ್ತದೆ’’ ಎಂದು ಸೌದಿ ಮಹಾ ಸಾರಿಗೆ ನಿರ್ದೇಶನಾಲಯದ ಸೌದಿ ಪ್ರೆಸ್ ಏಜನ್ಸಿಗೆ ನೀಡಿದ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News