ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ ಯುಎಇ ಸಮಿತಿ: ಪದಾಧಿಕಾರಿಗಳ ಆಯ್ಕೆ

Update: 2017-12-21 18:18 GMT
ಅಬ್ದುಲ್ಲಾ, ಇರ್ಷಾದ್

ದುಬೈ, ಡಿ. 21: ಯುಎಇಯಲ್ಲಿ ನೆಲೆಸಿರುವ ಕೊಂಡಂಗೇರಿಯ ಅನಿವಾಸಿ ಸದಸ್ಯರುಗಳ ಸಂಘಟನೆ ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ ಯುಎಇ ಇದರ ವಾರ್ಷಿಕ ಮಹಾ ಸಭೆ ಮತ್ತು ಮೀಲಾದ್ - ಮೌಲೂದ್ ಕಾರ್ಯಕ್ರಮವು ಅಜ್ಮಾನ್ ಕೆಸಿಎಫ್ ಸಭಾಂಗಣದಲ್ಲಿ ನಡೆಯಿತು.

ಸಂಘಟನೆಯ ಅಧ್ಯಕ್ಷ ಅಬ್ದುಲ್ಲಾ ಎಚ್ ಎಚ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೌಲೂದ್ ಪಾರಾಯಣಕ್ಕೆ ಹಂಝ ಸಅದಿ ಉಸ್ತಾದ್   ನೇತೃತ್ವವನ್ನು ನೀಡಿದರು.

ಯುಎಇಯಲ್ಲಿ ನೆಲೆಸಿರುವ ಕೊಂಡಂಗೇರಿಯ ಸದಸ್ಯರುಗಳ ಹಿತಕ್ಕಾಗಿ ಪ್ರಾರಂಭಗೊಂಡ ಸಂಘಟನೆಯು ಊರಿನಲ್ಲಿ ಮಾಡಿದ ಸಾಂತ್ವನ ಕಾರ್ಯಗಳು, ಕೊಂಡಂಗೇರಿಯ ಶಾಲೆಯ ಮತ್ತು ಮದ್ರಸ ವಿದ್ಯಾರ್ಥಿಗಳು ಹಾಗು ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು  ಹಮ್ಮಿಕೊಂಡಿರುವುದರ ಬಗ್ಗೆ ವಿವರಿಸಿ ಮಾತನಾಡಿದ ಅಧ್ಯಕ್ಷ ಅಬ್ದುಲ್ಲ, ಮುಂದೆಯೂ ಸಂಘಟನೆಯ ಸಾಂತ್ವನ ಕಾರ್ಯಕ್ರಮಗಳಲ್ಲಿ ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಸಂಘಟನೆಯ ಹಿರಿಯ ಸದಸ್ಯರುಗಳಾದ ಮುಹಮ್ಮದ್ ಹಾಜಿ ಪಿ ಇ ಮತ್ತು  ಅಬ್ದುಲ್ಲಾ ಎನ್ ಇ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಶಾಫಿ ಸಖಾಫಿ ಸ್ವಾಗತಿಸಿ, ಇರ್ಷಾದ್ ಎ ಎಚ್ ವಂದಿಸಿದರು. ನಂತರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ಅಬ್ದುಲ್ಲಾ ಎಚ್ ಎಚ್ , ಪ್ರಧಾನ ಕಾರ್ಯದರ್ಶಿಯಾಗಿ ಇರ್ಷಾದ್ ಎ ಎಚ್ , ಕೋಶಾಧಿಕಾರಿಯಾಗಿ ಮುಹಮ್ಮದ್ ಹಾಜಿ ಪಿ ಇ, ಉಪಾಧ್ಯಕ್ಷರುಗಳಾಗಿ ಶಾಫಿ ಸಖಾಫಿ ಜೆ ಯು, ಹಸನ್ ಕುಞಿ ಪಿ ಎ, ಅಬ್ದುಲ್ಲಾ ಎನ್ ಇ, ಜೊತೆ ಕಾರ್ಯದರ್ಶಿಗಳು: ರಿಯಾಝ್ ಕೆ ವೈ, ಇರ್ಷಾದ್ ಜೆ ಎಸ್, ರಝಾಕ್ ಎ ಇ, ಸಲಾಂ ಪಿ ಎ, ಮುಜೀಬ್ ಮಾಸ್ಟರ್, ಸಮಿತಿ ಸದಸ್ಯರುಗಳಾಗಿ ರಫೀಕ್ ಎ ಎಚ್  , ಹನೀಫ ಎಇ, ಝುಬೈರ್ ಪಿಎಸ್, ಮಶೂದ್ ಎಎ, ಹಮೀದ್ ಕೆಎ, ಅಝರ್ ಕೆ ಕೆ, ಹಂಝ ಹೆಚ್ ವೈ, ಬಷೀರ್ ಪಿಎ, ಫಾರೂಕ್ ಪಿಎಂ, ಅಬ್ದುಲ್ಲ ಮುಸ್ಲಿಯಾರ್ ಎಎ, ಹಂಝ ಸಅದಿ, ಇಬ್ರಾಹಿಂ ಪಿ ಎಚ್, ಅಝೀಝ್ ಎಚ್ ವೈ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News