ಮಿ.ಟ್ರಂಪ್, ನಿಮ್ಮ ಡಾಲರ್ ಮೂಲಕ ಟರ್ಕಿಯ ಪ್ರಜಾಪ್ರಭುತ್ವವನ್ನು ಖರೀದಿಸಲು ಸಾಧ್ಯವಿಲ್ಲ: ಎರ್ದೊಗಾನ್

Update: 2017-12-22 16:37 GMT

ಅಂಕಾರ, ಡಿ.22: "ಮಿ.ಟ್ರಂಪ್ ನಿಮ್ಮ ಡಾಲರ್ ಮೂಲಕ ನೀವು ಟರ್ಕಿಯ ಪ್ರಜಾಪ್ರಭುತ್ವವನ್ನು ಖರೀದಿಸಲು ಸಾಧ್ಯವಿಲ್ಲ" ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಹೇಳಿದ್ಧಾರೆ. 

ಜೆರುಸಲೇಂ ಅನ್ನು ಇಸ್ರೇಲಿನ ರಾಜಧಾನಿಯಾಗಿ ಅಮೆರಿಕ ಘೋಷಿಸಿದ ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಎರ್ದೋಗಾನ್ ಈ ಹೇಳಿಕೆ ನೀಡಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಅಮೆರಿಕದ ತೀರ್ಮಾನವನ್ನು ವಿರೋಧಿಸುವವರಿಗೆ ನಾವು ನೀಡುತ್ತಿರುವ ನೆರವನ್ನು ಕಡಿತಗೊಳಿಸಲಾಗುವುದು ಎಂದು ಅಮೆರಿಕದ ಖಾಯಂ ರಾಯಭಾರಿ ನಿಕ್ಕಿ ಹೇಲಿ ಬುಧವಾರ ಎಚ್ಚರಿಕೆ ನೀಡಿದ್ದರು. ಇದಕ್ಕೆ ಎರ್ದೊಗಾನ್ ಈ ರೀತಿ ಪ್ರತಿಕ್ರಿಯಿಸಿದರು.

"ಟ್ರಂಪ್ ನಿಮಗೆ ಟರ್ಕಿಯ ಪ್ರಜಾಪ್ರಭುತ್ವವನ್ನು ಡಾಲರ್ ಮೂಲಕ ಖರೀದಿಸಲು ಆಗುವುದಿಲ್ಲ ಎಂದು ಎರ್ದೋಗಾನ್  ಹೇಳಿದರು. ಜೆರುಸಲೇಂ ವಿಷಯದಲ್ಲಿ ಟರ್ಕಿಯ ತೀರ್ಮಾನ ಸ್ಪಷ್ಟವಾಗಿದೆ. ವಿಶ್ವಸಂಸ್ಥೆಯಲ್ಲಿ ಅಮೆರಿಕ ನಿರೀಕ್ಷಿಸಿದ ಪ್ರತಿಕ್ರಿಯೆ ಸಿಕ್ಕಿಲ್ಲ. ಜಾಗತಿಕ ರಾಷ್ಟ್ರಗಳು ಅಮೆರಿಕಕ್ಕೆ ಪಾಠ ಕಲಿಸಬೇಕಾಗಿದೆ ಎಂದು ಎರ್ದೋಗಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News