ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆಯ ವಿರುದ್ಧ ಕೆಎಐಸಿಐಐಡಿಯಿಂದ ಆಂದೋಲನ

Update: 2017-12-25 17:03 GMT

ರಿಯಾದ್ (ಸೌದಿ ಅರೇಬಿಯ), ಡಿ. 25: ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ನಿಲ್ಲಿಸುವುದು 2018ರ ತನ್ನ ಆದ್ಯತೆಗಳ ಪೈಕಿ ಒಂದಾಗಿದೆ ಎಂದು ಕಿಂಗ್ ಅಬ್ದುಲ್ಲಾ ಬಿನ್ ಅಬ್ದುಲ್ ಅಝೀಝ್ ಇಂಟರ್‌ನ್ಯಾಶನಲ್ ಸೆಂಟರ್ ಫಾರ್ ಇಂಟರ್‌ರಿಲೀಜಿಯಸ್ ಆ್ಯಂಡ್ ಇಂಟರ್‌ಕಲ್ಚರಲ್ ಡಯಲಾಗ್ (ಕೆಎಐಸಿಐಐಡಿ) ಹೇಳಿದೆ.

2018ಕ್ಕೆ ನಿಗದಿಯಾಗಿರುವ ಕೆಎಐಸಿಐಐಡಿಯ ಕೆಲಸ ಮತ್ತು ಚಟುವಟಿಕೆಗಳಿಗೆ ಆಸ್ಟ್ರಿಯದ ರಾಜಧಾನಿ ವಿಯೆನ್ನದಲ್ಲಿ ರವಿವಾರ ನಡೆದ ಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.

ಸೌದಿ ಅರೇಬಿಯ, ಆಸ್ಟ್ರಿಯ, ಸ್ಪೇನ್ ಮತ್ತು ವ್ಯಾಟಿಕನ್ ಸಂಘಟನೆಯ ಸ್ಥಾಪಕ ಸದಸ್ಯರಾಗಿವೆ.

ವಿಶ್ವಸಂಸ್ಥೆ, ಐರೋಪ್ಯ ಒಕ್ಕೂಟ ಮತ್ತು ಆಫ್ರಿಕನ್ ಒಕ್ಕೂಟಗಳ ಸಹಕಾರದೊಂದಿಗೆ 2017ರಲ್ಲಿ ಕೆಎಐಸಿಐಐಡಿ ನಡೆಸಿದ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಪರಾಮರ್ಶೆ ನಡೆಸಲಾಯಿತು ಎಂದು ಕೆಎಐಸಿಐಐಡಿ ಪ್ರಧಾನ ಕಾರ್ಯದರ್ಶಿ ಫೈಝಲ್ ಬಿನ್ ಅಬ್ದುರ್ರಹ್ಮಾನ್ ಬಿನ್ ಮುಅಮ್ಮರ್ ತಿಳಿಸಿದರು.

ಭಿನ್ನತೆ ಮತ್ತು ಸಹಜೀವನಕ್ಕೆ ಉತ್ತೇಜನ ನೀಡುವುದಕ್ಕಾಗಿ ‘ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆಯ ವಿರುದ್ಧ ಒಗ್ಗೂಡೋಣ’ ಎಂಬ ಅಂತಾರಾಷ್ಟ್ರೀಯ ಕಾರ್ಯಕ್ರಮವೊಂದನ್ನು 2018ರಲ್ಲಿ ಏರ್ಪಡಿಸಲು ಸಂಘಟನೆ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News