ಸೌದಿ: ನಿಯಮಗಳ ಉಲ್ಲಂಘನೆಗಾಗಿ 2.64 ಲಕ್ಷ ವಲಸಿಗರ ಬಂಧನ

Update: 2017-12-26 16:53 GMT

ರಿಯಾದ್, ಡಿ. 26: ಸೌದಿ ಅರೇಬಿಯದಲ್ಲಿ ವಸತಿ, ಕಾರ್ಮಿಕ ಮತ್ತು ಗಡಿ ಭದ್ರತೆ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ 2,64,245 ಮಂದಿಯನ್ನು ದಸ್ತಗಿರಿ ಮಾಡಲಾಗಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ ಹೇಳಿದೆ.

ನಿಯಮಗಳ ಉಲ್ಲಂಘಕರನ್ನು ಪತ್ತೆಹಚ್ಚುವುದಕ್ಕಾಗಿ ನವೆಂಬರ್ ಮಧ್ಯ ಭಾಗದಲ್ಲಿ ಅಭಿಯಾನವನ್ನು ಆರಂಭಿಸಲಾಗಿತ್ತು.

ಈ ಅವಧಿಯಲ್ಲಿ ಇಕಾಮ (ವಾಸ್ತವ್ಯ) ನಿಯಮಗಳನ್ನು ಉಲ್ಲಂಘಿಸಿದ 1,42,869 ಮಂದಿಯನ್ನು, ಕಾರ್ಮಿಕ ಕಾನೂನುಗಳನ್ನು ಮುರಿದ 87,487 ಮಂದಿಯನ್ನು ಹಾಗೂ ಗಡಿ ಭದ್ರತೆ ನಿಯಮಗಳನ್ನು ಮೀರಿದ 33,889 ಮಂದಿಯನ್ನು ದಸ್ತಗಿರಿ ಮಾಡಲಾಗಿದೆ.

ಈ ಅವಧಿಯಲ್ಲಿ ಸೌದಿ ಅರೇಬಿಯಕ್ಕೆ ಅಕ್ರಮವಾಗಿ ಗಡಿ ದಾಟಿ ಬಂದ 3,321 ಮಂದಿಯನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರ ಪೈಕಿ 73 ಶೇ. ಯಮನಿಗರು, 25 ಶೇ. ಇಥಿಯೋಪಿಯನ್ನರು ಮತ್ತು 2 ಶೇಕಡ ವಿವಿಧ ದೇಶಗಳ ಜನರಿದ್ದಾರೆ.

ಈ ಪೈಕಿ 3,054 ಮಂದಿಯನ್ನು ವಾಪಸ್ ಕಳುಹಿಸಲಾಗಿದೆ.

ಅದೇ ವೇಳೆ, ಸೌದಿ ಅರೇಬಿಯದಿಂದ ಅಕ್ರಮವಾಗಿ ಗಡಿ ದಾಟಿ ಹೊರ ಹೋಗಲು ಯತ್ನಿಸಿದ 78 ಮಂದಿಯನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News