ಚಿಕಿತ್ಸೆಗಾಗಿ ರಿಯಾದ್ ತಲುಪಿದ ಫೆಲೆಸ್ತೀನ್ ನ ಸಯಾಮೀಸ್ ಅವಳಿಗಳು

Update: 2017-12-27 07:38 GMT

ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಲಿದೆ ಸೌದಿ ಸರಕಾರ

ರಿಯಾದ್,ಡಿ. 26: ಸೌದಿ ಯುವರಾಜರ ವಿಶೇಷ ಸೂಚನೆ ಮೇರೆಗೆ ಫೆಲೆಸ್ತೀನ್ ನ ಸಯಾಮೀಸ್ ಅವಳಿಗಳಾದ ಹನೀನ್, ಫರಾಹ್‍ರನ್ನು ಜೋರ್ಡಾನಿನಿಂದ ರಿಯಾದ್‍ಗೆ ಕರೆತರಲಾಗಿದೆ.

ಗಾಝಾದಲ್ಲಿ ಜನಿಸಿದ ಈ ಸಯಾಮೀಸ್ ಅವಳಿಗಳಿಗೆ ಅಗತ್ಯವಿರುವ ಚಿಕಿತ್ಸೆ ನೀಡುವಂತೆ ಮತ್ತು ಅಗತ್ಯವಿದ್ದರೆ ಶಸ್ತ್ರಕ್ರಿಯೆ ನಡೆಸುವಂತೆ ಸಲ್ಮಾನ್ ಸೂಚಿಸಿದ್ದರು. ಸೌದಿ ರಾಜಧಾನಿ ನ್ಯಾಶನಲ್ ಗಾರ್ಡ್ ಕೇಂದ್ರದಲ್ಲಿರುವ ಕಿಂಗ್ ಅಬ್ದುಲ್ ಅಝೀಝ್ ಆಸ್ಪತ್ರೆಯಲ್ಲಿ ಅವಳಿಗಳ ವೈದ್ಯಕೀಯ ತಪಾಸಣೆ ಆರಂಭವಾಗಿದೆ.

ಹೊಟ್ಟೆಯ ಭಾಗ ಅಂಟಿಕೊಂಡಿರುವುದರಿಂದ ಶಿಶುಗಳನ್ನು ಬೇರ್ಪಡಿಸುವ ಸಾಧ್ಯತೆಯನ್ನು ನಂತರ ನಿರ್ಧರಿಸಲಾಗುವುದು. ಕೆಲವು ಆಂತರಿಕ ಅವಯವಗಳು ಪರಸ್ಪರ ಇಬ್ಬರಲ್ಲಿ ಅಂಟಿಕೊಂಡಿವೆ. ಶಸ್ತ್ರಕ್ರಿಯೆ ತಜಟಿಲವಾಗಬಹುದಾದ ಸಾಧ್ಯತೆಯೂ ಇದೆ ಎಂದು ವೈದ್ಯರ ತಂಡ ಅಭಿಪ್ರಾಯಿಸಿದೆ. ಸಯಾಮೀಸ್ ಅವಳಿಗಳ  ಚಿಕಿತ್ಸೆ ಮತ್ತು ಇತರ ಖರ್ಚು ವೆಚ್ಚವನ್ನು ಸೌದಿ ಸರಕಾರ ಭರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News