ಬುರ್ಜ್ ಖಲೀಫಾ: ಈ ಬಾರಿ ಹೊಸ ವರ್ಷಕ್ಕೆ ಸುಡುಮದ್ದು ಪ್ರದರ್ಶನದ ಬದಲು ಇರಲಿದೆ ಈ ವಿಶೇಷತೆ

Update: 2017-12-27 13:55 GMT

ದುಬೈ, ಡಿ.27: ಈ ಬಾರಿ ಡಿಸೆಂಬರ್ 31ರಂದು ಹೊಸ ವರ್ಷಾಚರಣೆಯ ಸಮಯದಲ್ಲಿ ವಿಶ್ವವಿಖ್ಯಾತ ಬುರ್ಜ್ ಖಲೀಫಾದಲ್ಲಿ ಸುಡುಮದ್ದು ಪ್ರದರ್ಶನವಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದಕ್ಕೆ ಬದಲಾಗಿ ಈ ವರ್ಷ ವಿಶೇಷ ವಿದ್ಯುತ್ ದೀಪ ಪ್ರದರ್ಶನ ನಡೆಯಲಿದೆ ಎಂದವರು ತಿಳಿಸಿದ್ದಾರೆ. ಬುರ್ಜ್ ಖಲೀಫಾದ ಮಾಲಕ ಮತ್ತು ಅದರ ನಿರ್ವಹಣೆ ಮಾಡುವ ಎಮಾರ್ ಸಂಸ್ಥೆ ಹಾಗೂ ದುಬೈ ಮಾಲ್ ಈ ವರ್ಷ ಹೊಸ ವರ್ಷಾಚರಣೆಯ ಸಮಯದಲ್ಲಿ ವಿಶೇಷ ವಿದ್ಯುತ್ ದೀಪ ಪ್ರದರ್ಶನವನ್ನು ಆಯೋಜಿಸಿದ್ದಾರೆ.

ಈ ಬಗ್ಗೆ ಎಮಾರ್ ಸಂಸ್ಥೆ ಫೇಸ್‌ಬುಕ್‌ನಲ್ಲಿ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಈ ವರ್ಷ ದುಬೈಯಲ್ಲಿ ಹೊಸ ವರ್ಷಾಚರಣೆ ಹಿಂದೆಂದಿಗಿಂತಲೂ ಭಿನ್ನವಾಗಿರಲಿದೆ. 2018ನ್ನು ಸ್ವಾಗತಿಸುವ ವಿದ್ಯುತ್ ದೀಪ ಪ್ರದರ್ಶನಕ್ಕೆ ಎಲ್ಲರೂ ಸಜ್ಜಾಗಿ ಎಂದು ಹೇಳಿಕೆ ನೀಡಿದೆ. ಈ ವಿಡಿಯೊದಲ್ಲಿ 1.1.2018ನ್ನು ನೀಲಿ ಬಣ್ಣದ ನಿಯೋನ್ ದೀಪದಲ್ಲಿ ಬರೆಯಲಾಗಿದೆ. ಇದೇ ವೇಳೆ, ಗ್ಲೋಬಲ್ ವಿಲೇಜ್ ಫೈರ್‌ವರ್ಕ್ಸ್ ಎಂಬ ಸಂಸ್ಥೆ ಈ ಬಾರಿ ಭಾರತ, ಪಾಕಿಸ್ತಾನ ಮತ್ತು ಫಿಲಿಪೈನ್ಸ್‌ನಲ್ಲಿ ಹೊಸ ವರ್ಷಾಚರಣೆಯ ವೇಳೆ ಸುಡುಮದ್ದು ಪ್ರದರ್ಶನ ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News