2018 ಜನವರಿಯಲ್ಲಿ ಹೆಚ್ಚಾಗಲಿದೆ ಯುಎಇ ಇಂಧನ ದರ

Update: 2017-12-27 17:32 GMT

ದುಬೈ, ಡಿ.27: 2018ರ ಜನವರಿಯಲ್ಲಿ 98 ಸೀಸರಹಿತ ಗ್ಯಾಸೊಲಿನ್ ದರವು 0.09 ಫಿಲ್ಸ್ ಏರಿಕೆ ಕಂಡು 2.24 ದಿರ್ಹಮ್ ಆಗಲಿದ್ದರೆ, 95 ಸೀಸರಹಿತ ಗ್ಯಾಸೊಲಿನ್ ಬೆಲೆಯಲ್ಲಿ 0.08 ಫಿಲ್ಸ್ ಏರಿಕೆಯಾಗಿ 2.12 ದಿರ್ಹಮ್ ತಲುಪಲಿದೆ ಎಂದು ಇಂಧನ ಸಚಿವಾಲಯ ತಿಳಿಸಿದೆ. ಇದೇ ವೇಳೆ 91 ಸೀಸರಹಿತ ಗ್ಯಾಸೊಲಿನ್ ದರವು 0.08 ಫಿಲ್ಸ್‌ಗಳ ಏರಿಕೆ ಕಂಡು 2.05 ದಿರ್ಹಮ್‌ಗೆ ಏರಿಕೆಯಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

  ಡಿಸೆಂಬರ್‌ನಲ್ಲಿ ಇಂಧನ ದರಗಳಲ್ಲಿ ಏರಿಕೆಯಾಗಿತ್ತು. ಜನವರಿ ತಿಂಗಳಿಗೆ ಡೀಸೆಲ್ ದರದಲ್ಲಿ 2.33 ದರ್ಹಮ್ ಏರಿಕೆ ಮಾಡಲಾಗಿದ್ದು, 0.13 ಫಿಲ್ಸ್ ಏರಿಕೆ ಕಂಡಿದೆ ಎಂದು ಸಚಿವಾಲಯ ತಿಳಿಸಿದೆ. 2015ರಲ್ಲಿ ಇಂಧನವನ್ನು ನಿಯಂತ್ರಣ ಮುಕ್ತಗೊಳಿಸಿದ ಮೊದಲ ತಿಂಗಳಲ್ಲಿ ಯುಎಇಯ ವಾಹನ ಸವಾರರು ಅತ್ಯಧಿಕ ಬೆಲೆ ತೆತ್ತು ತೈಲ ಖರೀದಿಸಬೇಕಾಗಿತ್ತು. ಆ ಸಮಯದಲ್ಲಿ 98 ಸೀಸರಹಿತ ಗ್ಯಾಸೊಲಿನ್ ಮತ್ತು 95 ಸೀಸರಹಿತ ಗ್ಯಾಸೊಲಿನ್ ಬೆಲೆಯು ಕ್ರಮವಾಗಿ 2.25 ದಿರ್ಹಮ್ ಮತ್ತು 2.14 ದಿರ್ಹಮ್ ಪ್ರತೀ ಲೀಟರ್‌ಗೆ ಇತ್ತು ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News