ಸರಕಾರಿ ಉದ್ಯೋಗಿಗಳಿಗೆ ಮಾಸಿಕ ಪರಿಹಾರಕ್ಕೆ ಸೌದಿ ದೊರೆ ಆದೇಶ

Update: 2018-01-06 17:23 GMT

ರಿಯಾದ್ (ಸೌದಿ ಅರೇಬಿಯ), ಜ. 6: ಗೃಹ ಬಳಕೆಯ ಅನಿಲ ಬೆಲೆ ಏರಿಕೆ ಮತ್ತು ವ್ಯಾಟ್ ಜಾರಿಯಿಂದಾಗಿ ಜೀವನ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಒಂದು ವರ್ಷದ ಅವಧಿಗೆ ಸರಕಾರಿ ಉದ್ಯೋಗಿಗಳಿಗೆ ಪ್ರತಿ ತಿಂಗಳು 1,000 ರಿಯಾಲ್ (ಸುಮಾರು 17,000 ರೂಪಾಯಿ) ಪರಿಹಾರ ನೀಡುವಂತೆ ಸೌದಿ ಅರೇಬಿಯದ ದೊರೆ ಸಲ್ಮಾನ್ ಶನಿವಾರ ಆದೇಶ ನೀಡಿದ್ದಾರೆ.

ಯಮನ್ ಜೊತೆಗಿನ ಗಡಿಯಲ್ಲಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸೇನಾ ಸಿಬ್ಬಂದಿಗೆ ತಿಂಗಳಿಗೆ 5,000 ರಿಯಾಲ್ (ಸುಮಾರು 84,500 ರೂಪಾಯಿ) ಪರಿಹಾರ ನೀಡುವಂತೆಯೂ ದೊರೆ ಆದೇಶಿಸಿದ್ದಾರೆ.

ದೇಶದ ಆರ್ಥಿಕ ಸುಧಾರಣೆಯ ಭಾಗವಾಗಿ ಸೋಮವಾರದಿಂದ ತೈಲ ಮತ್ತು ಅನಿಲ ಬೆಲೆಯನ್ನು ದುಪ್ಪಟ್ಟುಗೊಳಿಸಲಾಗಿದೆ. ವಿವಿಧ ಉತ್ಪನ್ನಗಳು ಮತ್ತು ಸೇವೆಗಳ ಮೇಲೆ 5 ಶೇಕಡ ವ್ಯಾಟ್ ಕೂಡ ಅದೇ ದಿನ ಜಾರಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News