ಸೌದಿ: ವಿಚಾರಣೆ ಎದುರಿಸಲಿರುವ ಬಂಧಿತ ರಾಜಕುಮಾರರು

Update: 2018-01-07 17:51 GMT

ರಿಯಾದ್ (ಸೌದಿ ಅರೇಬಿಯ), ಜ. 7: ಸೌದಿ ಅರೇಬಿಯದ ಮಿತವ್ಯಯ ಯೋಜನೆಗಳ ವಿರುದ್ಧ ಪ್ರತಿಭಟಿಸಿದ 11 ರಾಜಕುಮಾರರನ್ನು ಬಂಧಿಸಿರುವುದನ್ನು ಆ ದೇಶದ ಅಟಾರ್ನಿ ಜನರಲ್ ರವಿವಾರ ಖಚಿತಪಡಿಸಿದ್ದಾರೆ.

‘ಸಾರ್ವಜನಿಕ ಶಾಂತಿ ಮತ್ತು ವ್ಯವಸ್ಥೆಯನ್ನು ಭಂಗಪಡಿಸಿದ’ ಅವರು ವಿಚಾರಣೆ ಎದುರಿಸಲಿದ್ದಾರೆ ಎಂದು ಅವರು ಹೇಳಿದರು.

ರಾಜ ಕುಟುಂಬದ ಸದಸ್ಯರ ನೀರು ಮತ್ತು ವಿದ್ಯುತ್ ಬಿಲ್‌ಗಳನ್ನು ಸರಕಾರ ಪಾವತಿಸುವುದನ್ನು ನಿಲ್ಲಿಸುವ ಸರಕಾರದ ನಿರ್ಧಾರದ ವಿರುದ್ಧ ಪ್ರತಿಭಟಿಸಲು ರಿಯಾದ್‌ನ ಐತಿಹಾಸಿಕ ಅರಮನೆ ಕಸರ್ ಅಲ್ ಹೊಕಮ್‌ನಲ್ಲಿ ಸೇರಿದ್ದ ರಾಜಕುಮಾರರನ್ನು ಬಂಧಿಸಲಾಗಿದೆ ಎಂಬುದಾಗಿ ಸೌದಿ ಅರೇಬಿಯದ ಮಾಧ್ಯಮಗಳು ಶನಿವಾರ ವರದಿ ಮಾಡಿದ್ದವು.

‘‘ಬಂಧನದ ಬಳಿಕ, ಅವರ ವಿರುದ್ಧ ಹಲವಾರು ಆರೋಪಗಳನ್ನು ಹೊರಿಸಲಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News