ಡಿ.ಕೆ.ಎಸ್.ಸಿ ಫ್ಯಾಮಿಲಿ ಮುಲಾಖತ್: ಅಧೀನ ಸಂಸ್ಥೆಗೆ ಸಹಕಾರದ ಭರವಸೆ

Update: 2018-01-09 13:01 GMT

ದುಬೈ, ಜ. 9: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ. ರಾಷ್ಟ್ರಿಯ ಸಮಿತಿಯು ವುಡ್ ಲೀಂ ಪಾರ್ಕ್ ಸ್ಕೂಲ್ ಅಜ್ಮಾನ್ ನಲ್ಲಿ   ಹಮ್ಮಿಗೊಂಡ ಗ್ರಾಂಡ್ ಕರಾವಳಿ ಫ್ಯಾಮಿಲಿ ಮುಲಾಖತ್ ನಡೆಯಿತು.

ಕಾರ್ಯಕ್ರಮವು ಮಾಸ್ಟರ್ ಮುಹಮ್ಮದ್ ಹಾದಿ ಅವರ ಕಿರಾಹತ್ ಹಾಗೂ ಇಬ್ರಾಹಿಂ ಸಖಾಫಿ ಕೆದಂಬಾಡಿ ಅವರ  ದುವಾದೊಂದಿಗೆ  ಮರ್ಕಝ್ ಕಮಿಟಿ ಪ್ರಧಾನ ಕಾರ್ಯದರ್ಶಿಯಾಗಿದ್ದ  ಜಿ.ಎಂ.ಕಾಮಿಲ್ ಸಖಾಫಿ  ಉದ್ಘಾಟಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ರಾಷ್ಟೀಯ ಸಮಿತಿ ಅಧ್ಯಕ್ಷರಾದ ಹಾಜಿ. ಇಕ್ಬಾಲ್ ಕಣ್ಣಂಗಾರ್ ಪ್ರಾಸ್ತಾವಿಕ ಮಾತನ್ನು ಆಡಿದರು.

ವೇದಿಕೆಯಲ್ಲಿ ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಹಾಜಿ ಇಸ್ಮಾಯಿಲ್ ಕಿನ್ಯ, ರಾಷ್ಟ್ರಿಯ ಸಮಿತಿ ಉಪಾಧ್ಯಕ್ಷ  ಹಾಜಿ ಅಬ್ದುಲ್ಲಾ ಬೀಜಾಡಿ, ರಾಷ್ಟ್ರಿಯ ಸಮಿತಿ ಸಲಹೆಗಾರ ಹಾಜಿ ಹಸನಬ್ಬ ಕೊಳ್ನಾಡು, ಫ್ಯಾಮಿಲಿ ಮುಲಾಖತ್  ಸ್ವಾಗತ  ಸಮಿತಿ  ಸಹ  ಸಂಚಾಲಕ ಇಬ್ರಾಹಿಂ ಕಳತ್ತೂರ್, ಅಬ್ದುಲ್ಲಾ ಮುಸ್ಲಿಯಾರ್, ಅಬೂಬಕ್ಕರ್ ಮದನಿ, ಹಾಜಿ ಅಬ್ದುಲ್ಲಾ ಬೀಜಾಡಿ,  ಕೆ.ಸಿ.ಎಫ್  ಶಾರ್ಜಾ  ನೇತಾರ ಅಬ್ದುಲ್ ಕರೀಮ್ ಉಸ್ತಾದ್, ದಾರುಲ್ ಅಸರಿಯಾ ಸಂಚಾಲಕ ಮುಹಮ್ಮದ್ ಫೈಝಿ  ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು  ಡಿ.ಕೆ.ಎಸ್.ಸಿ ರಾಷ್ಟೀಯ ಸಮಿತಿ ಗೌರವಾಧ್ಯಕ್ಷ ಸಯ್ಯದ್ ತ್ವಾಹ ಬಾಫಖಿ ತಂಙಳ್  ಉದ್ಘಾಟನೆಯೊಂದಿಗೆ ಭಾರತ  ಹಾಗೂ ಯು.ಎ.ಇ ರಾಷ್ಟ್ರದ ರಾಷ್ಟ್ರಗೀತೆಯೊಂದಿಗೆ ಚಾಲನೆ ನೀಡಲಾಯಿತು.  

ಸಂಜೆ  ನಡೆದ ಸಮಾರೋಪಕ್ಕೆ ಯು.ಎ.ಇ ರಾಷ್ಟ್ರಿಯ ಸಮಿತಿ ಗೌರವ ಅಧ್ಯಕ್ಷ ಸಯ್ಯದ್ ತ್ವಾಹ ಬಾಫಖಿ ತಂಙಳ್ ದುಃವಾ  ಮೂಲಕ  ಸಭೆಗೆ ಚಾಲನೆ ನೀಡಿದರು. 

ಯು.ಎ.ಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಾಜಿ ಇಕ್ಬಾಲ್ ಕಣ್ಣಂಗಾರ್ ಸಭೆಯ ಸಭಾಧ್ಯಕ್ಷೆತೆ ವಹಿಸಿದರು. ಕರ್ನಾಟಕ ರಾಜ್ಯ ಆಹಾರ  ಮತ್ತು  ನಾಗರಿಕ ಸಚಿವ ಯು.ಟಿ.ಖಾದರ್, ಶಾಸಕ ಮೊಯ್ದಿನ್ ಬಾವ, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ ಕಿನ್ಯ,  ಮುಲಾಖತ್ ಕಮಿಟಿ ಚೆಯರ್ಮೆನ್ ಅಬ್ದುಲ್ ಲತೀಫ್ ಮುಲ್ಕಿ, ಸೌದಿ ಅಲ್ ಫಲಾಹ್ ಗ್ರೂಪ್ ನ ನಝೀರ್ ಹುಸೈನ್, ಬಿ.ಸಿ.ಎಫ್. ಅಧ್ಯಕ್ಷ  ಬಿ.ಕೆ.ಯೂಸುಫ್, ವುಡ್ ಲೇಮ್ ಪಾರ್ಕ್ ಸ್ಕೂಲ್ ಮೆನೇಜಿಂಗ್ ಡೈರಕ್ಟರ್ ನೌಫಲ್, ಸಿ.ಇ.ಒ. ಗಪೂರ್, ಸಮೀಮ್ ಇಂಜಿನಿಯರಿಂಗ್ ಮೆನೇಜಿಂಗ್ ಡೈರೆಕ್ಟರ್ ಹಾಜಿ ಮುಹಮ್ಮದ್ ದೆಂಜಿಪ್ಪಾಡಿ, ಬಿ.ಎಂ.ಸಾಬಿರ್ ಅಲ್ ಪುರ್ಕಾನ್, ಮೊಯಿದೀನ್ ವುಡ್ ವರ್ಕ್ಸ್ ನ ಮೆನೇಜರ್ ಅನ್ವರ್,  ಲ್ಯಾಂಡ್  ಮಾರ್ಕ್  ಗ್ರೂಪ್ ಇದರ ರಿಯಾಝ್ , ಕೆ.ಸಿ.ಎಫ್  ಯು.ಎ.ಇ ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಾಜೂರ್,  ವುಡ್ ಲೇಮ್ ಪಾರ್ಕ್  ಸ್ಕೂಲ್ ನ  ಇಬ್ರಾಹಿಂ ಸಖಾಫಿ ಕಿನ್ನಿಂಗಾರ್, ಮುಲಾಖತ್ ಕಮಿಟಿ ಸಂಚಾಲಕರರಾದ ಹುಸೈನ್ ಹಾಜಿ ಕಿನ್ಯ  ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಯೂಸುಫ್ ಅರ್ಲಪದವು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.  ಫ್ಯಾಮಿಲಿ ಮೂಲಾಖತ್ ಚೆಯರ್ಮೆನ್ ಅಬ್ದುಲ್ ಲತೀಫ್ ಮುಲ್ಕಿ ಸ್ವಾಗತ ಭಾಷಣ ಮಾಡಿ ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಹಾಜಿ. ಇಸ್ಮಾಯಿಲ್ ಕಿನ್ಯ  ಡಿ.ಕೆ.ಎಸ್.ಸಿ ನಡೆದು ಬಂದ ದಾರಿಯನ್ನು ವಿವರಿಸುವುದರೊಂದಿಗೆ ಸಭೆಯನ್ನು ಉದ್ಘಾಟಿಸಿದರು. 

ರಾಷ್ಟ್ರಿಯ ಸಮಿತಿ ಅಧ್ಯ ಕ್ಷ ಹಾಜಿ ಇಕ್ಬಾಲ್ ಕಣ್ಣಂಗಾರ್  ಡಿ.ಕೆ.ಎಸ್.ಸಿ ಯು.ಎ.ಇ ವತಿಯಿಂದ ನಡೆಸುತ್ತಿರುವ  ಮಹಿಳಾ ಕಾಲೇಜು ಕಟ್ಟಡ  ನಿರ್ಮಾಣ  ಹಾಗು ಇನ್ನಿತರ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. 

ಸಚಿವರು  ಅಲ್ ಇಹ್ಸಾನ್ ಎಜುಕೇಷನ್ ಸೆಂಟರ್ ಇದರ ಸ್ಥಿರ ವರಮಾನಕ್ಕಾಗಿ ಪ್ರಾರಂಭಿಸಿದ ಸಿಲ್ವರ್ ಕಾರ್ಡ್ ಯೋಜನೆಯನ್ನು ಹಾಜಿ ಮುಹಮ್ಮದ್  ದೆಂಜಿಪ್ಪಾಡಿ ಅವರಿಗೆ ನೀಡುವುದರ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮವನ್ನು  ಯು.ಎ.ಇ ಸಂಚಾಲಕರಾದ ಹಾಜಿ ನವಾಝ್ ಕೋಟೆಕ್ಕಾರ್  ನಡೆಸಿಕೊಟ್ಟರು. ಸಚಿವರು ಮಾತನಾಡಿ  ಡಿ.ಕೆ.ಎಸ್.ಸಿ ಯ ಕಾರ್ಯ ವೈಕರ್ಯವನ್ನು ಕೊಂಡಾಡಿದರು ಹಾಗೂ ತಮ್ಮ ಸಂಪೂರ್ಣ  ಸಹಕಾರ  ನೀಡುವು ದಾಗಿ  ಭರವಸೆ ನೀಡಿದರು.

ಶಾಸಕ ಮೊಯ್ದಿನ್ ಬಾವ ಮಾತನಾಡಿ  ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ   ಅಲ್  ಫಲಾಹ್  ಗ್ರೂಪ್ ನ ನಝೀರ್ ಹುಸೈನ್, ಬಿ.ಸಿ.ಎಫ್. ಅಧ್ಯಕ್ಷ ಡಾ. ಬಿ.ಕೆ .ಯೂಸುಫ್, ಬಿ.ಎಂ.ಸಬ್ಬಾರ್ - ಅಲ್ ಪುರ್ಕಾನ್  ಶುಭ ಕೋರಿದರು.

ವೇದಿಕೆ ಯಲ್ಲಿ   ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಣೆಯು ನಡೆಯಿತ್ತು.  ಉಮ್ಮರ್ ಎಸ್.ಎಂ. ಹಾಗೂ ಕಮಲ್ ಅಜ್ಜಾವರ  ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅದೃಷ್ಟ ಚೀಟಿ ಎತ್ತುವ ಮೂಲಕ ಒಬ್ಬರಿಗೆ ಪವಿತ್ರ  ಉಮ್ರಾ  ಯಾತ್ರೆಗೆ  ಅವಕಾಶ  ಕಲ್ಪಿಸಲಾಯಿತು ಅದರಲ್ಲಿ ಜಾವಿದ್ ಅಲಿ ಕಾಪು  ಭಾಗ್ಯಶಾಲಿಯಾಗಿ ಒರಹೊಮ್ಮಿದರು. ಪ್ಯಾಮಲಿ ಮುಲಾಖತ್ ಸಹ ಸಂಚಾಲಕ ಇಬ್ರಾಹಿಂ  ಕಳತ್ತೂರ್  ವಂದಿಸಿದರು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ತುಂಬೆ ಹಾಸ್ಪಿಟಲ್ (GMC ) ವತಿಯಿಂದ  ಉಚಿತ ಅರೋಗ್ಯ ತಪಾಸಣೆ ನಡೆಯಿತು.

ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾಗಿ ಬಿ.ಎ. ತುಂಬೆ (ಮೊಯಿದ್ದೀನ್) ವುಡ್ ವರ್ಕ್ಸ್ ಮತ್ತು ತುಂಬೆ ಹಾಸ್ಪಿಟಲ್ (GMC), ಸಹ  ಪ್ರಾಯೋಜಕರಾಗಿ  ಲ್ಯಾಂಡ್ ಮಾರ್ಕ್ ಗ್ರೂಪ್, ಹಾಜಿ ಮೊಯಿದೀನ್ ಕುಟ್ಟಿ ಕಕ್ಕಿಂಜೆ ದಿಬ್ಬ,  ಅಲ್ ಸುಹೋಲ್ ಟ್ರೇಡಿಂಗ್ ಕಂ ಲಿಮಿಟೆಡ್,  ಅಲ್ ಶಹಮ ಮೆರೀನ್  ಎಕ್ಯುಪಿಮೆಂಟ್ ಆ್ಯಂಡ್ ಪಿಸ್ಸಿಂಗ್ ಎಸ್ಸೆಸ್ಸ್ಅಬುದಾಭಿ, ಅಫೀಜ್ ಪಾಣೆಮಂಗಳೂರು  ಸಹಕರಿಸಿದರು.

Writer - ಎಸ್.ಯೂಸುಫ್ ಅರ್ಲಪದವು

contributor

Editor - ಎಸ್.ಯೂಸುಫ್ ಅರ್ಲಪದವು

contributor

Similar News