ಸೌದಿ: ಗಾಝಾದ ಸಯಾಮಿ ಅವಳಿಗಳನ್ನು ಬೇರ್ಪಡಿಸುವ ಶಸ್ತ್ರಚಿಕಿತ್ಸೆ ಯಶಸ್ವಿ

Update: 2018-01-09 16:21 GMT

ರಿಯಾದ್, ಜ. 9: ಫೆಲೆಸ್ತೀನ್‌ನ ಗಾಝಾಪಟ್ಟಿಯಲ್ಲಿ ಜನಿಸಿದ ಸಯಾಮಿ ಹೆಣ್ಣು ಅವಳಿಗಳನ್ನು ರಿಯಾದ್‌ನಲ್ಲಿ ಸೋಮವಾರ ನಡೆದ ‘ಯಶಸ್ವಿ’ ಶಸ್ತ್ರಚಿಕಿತ್ಸೆಯಲ್ಲಿ ಬೇರ್ಪಡಿಸಲಾಗಿದೆ ಎಂದು ಸೌದಿ ಪ್ರೆಸ್ ಏಜನ್ಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಕಿಂಗ್ ಅಬ್ದುಲ್ಲಾ ಸ್ಪೆಶಲಿಸ್ಟ್ ಚಿಲ್ಡ್ರನ್ಸ್ ಆಸ್ಪತ್ರೆಯಲ್ಲಿ ಫರಾಹ್ ಮತ್ತು ಹನೀನ್ ಎಂಬ ಮಕ್ಕಳನ್ನು ಬೇರ್ಪಡಿಸುವ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ಶಸ್ತ್ರಚಿಕಿತ್ಸೆ ನಡೆಸಿದ ತಂಡದ ಮುಖ್ಯಸ್ಥ ಡಾ. ಅಬ್ದುಲ್ಲಾ ಬಿನ್ ಅಬ್ದುಲ್ ಅಝೀಝ್ ಅಲ್-ರಬಿಅ ಹೇಳಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಸೋಮವಾರ ಬೆಳಗ್ಗೆ ಶಸ್ತ್ರಚಿಕಿತ್ಸೆ ಆರಂಭಗೊಂಡಿತು. ಅರಿವಳಿಕೆ, ಲಿವರ್ ಮುಂತಾದ ಅಂಗಗಳನ್ನು ಬೇರ್ಪಡಿಸುವುದು ಹಾಗೂ ಅವುಗಳನ್ನು ಹನೀನ್‌ಗೆ ಜೋಡಿಸುವುದು ಸೇರಿದಂತೆ ಶಸ್ತ್ರಚಿಕಿತ್ಸೆಯಲ್ಲಿ ಒಂಬತ್ತು ಹಂತಗಳಿದ್ದವು.

ಹೊಟ್ಟೆ ಮತ್ತು ಸೊಂಟ ಭಾಗದಲ್ಲಿ ಅಂಟಿಕೊಂಡ ಸ್ಥಿತಿಯಲ್ಲಿ ಈ ಮಕ್ಕಳು ಅಕ್ಟೋಬರ್‌ನಲ್ಲಿ ಗಾಝಾದ ಶಿಫಾ ಆಸ್ಪತ್ರೆಯಲ್ಲಿ ಜನಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News