ಸೌದಿ ಅರೇಬಿಯದಲ್ಲಿ ಟ್ಯಾಕ್ಸಿ ಚಲಾಯಿಸಲಿದ್ದಾರೆ ಹತ್ತು ಸಾವಿರ ಮಹಿಳೆಯರು

Update: 2018-01-12 16:41 GMT

ಸೌದಿ ಅರೇಬಿಯ, ಜ.12: ಸೌದಿ ಅರೇಬಿಯದಲ್ಲಿ ಮಹಿಳೆಯರು ವಾಹನ ಚಾಲನೆ ಮಾಡುವ ಮೇಲಿದ್ದ ನಿಷೇಧವನ್ನು ತೆಗೆದು ಹಾಕಿರುವ ಹಿನ್ನೆಲೆಯಲ್ಲಿ ಅಲ್ಲಿನ ಸುಮಾರು ಹತ್ತು ಸಾವಿರ ಮಹಿಳೆಯರಿಗೆ ಟ್ಯಾಕ್ಸಿ ಚಾಲಕಿಯರಾಗಿ ದುಡಿಯುವ ಅವಕಾಶ ಲಭಿಸಿದೆ.

ಸದ್ಯ ಸೌದಿಯ ಎರಡು ಪ್ರಮುಖ ಟ್ಯಾಕ್ಸಿ ಸಂಸ್ಥೆಗಳಾದ ಉಬರ್ ಮತ್ತು ಕರೀಮ್ ಕೇವಲ ಪುರುಷ ಚಾಲಕರನ್ನೇ ಉದ್ಯೋಗಕ್ಕೆ ನೇಮಿಸಿದೆ. ಇದೀಗ ಈ ಸಂಸ್ಥೆಗಳು ಮಹಿಳಾ ಚಾಲಕರಿಗೂ ಅವಕಾಶ ನೀಡಲು ಮುಂದಾಗಿದೆ.

ಸೌದಿಯಲ್ಲಿ ಉಬರ್ ಸಂಸ್ಥೆಯ ಒಟ್ಟಾರೆ ಗ್ರಾಹಕರಲ್ಲಿ ಶೇ. 80 ಮಹಿಳಾ ಪ್ರಯಾಣಿಕರಾಗಿದ್ದರೆ ದುಬೈ ಮೂಲದ ಕರೀಮ್ ಸಂಸ್ಥೆಯ ಶೇ. 70 ಮಹಿಳಾ ಪ್ರಯಾಣಿಕರನ್ನು ಹೊಂದಿದೆ. ಈ ಸಂಸ್ಥೆಗಳ ಮೊಬೈಲ್ ಆ್ಯಪ್‌ಗಳು ಸೌದಿಯ ಮಹಿಳೆಯರಿಗೆ ಹೊರಗಡೆ ಓಡಾಡಲು ಒಂದು ಪ್ರಮುಖ ಸಾಧನವಾಗಿದೆ.

ಸದ್ಯ ಮಹಿಳಾ ಚಾಲಕರನ್ನು ನೇಮಿಸುವ ಮೂಲಕ ಸೌದಿ ಅರೇಬಿಯದಲ್ಲಿ ದೊರೆ ಸಲ್ಮಾನ್ ಆರಂಭಿಸಿದ ಮಹಿಳಾ ಸಬಲೀಕರಣ ಪರಿಕಲ್ಪನೆಗೆ ಮತ್ತಷ್ಟು ಪುಷ್ಟಿ ಸಿಗಲಿದೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News