ವಾಣಿಜ್ಯ ವಿಮಾನವನ್ನು ಅಡ್ಡಗಟ್ಟಿದ ಕತರ್ ಯುದ್ಧ ವಿಮಾನಗಳು: ಯುಎಇ ಆರೋಪ

Update: 2018-01-15 17:45 GMT

ದುಬೈ, ಜ. 15: ಬಹರೈನ್‌ಗೆ ಹೋಗುತ್ತಿದ್ದ ತನ್ನ ವಾಣಿಜ್ಯ ವಿಮಾನವೊಂದನ್ನು ಕತರ್‌ನ ಯುದ್ಧ ವಿಮಾನಗಳು ತಡೆದಿವೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸೋಮವಾರ ಹೇಳಿದೆ. ಆದರೆ, ಈ ಆರೋಪವನ್ನು ಕತರ್ ನಿರಾಕರಿಸಿದೆ.

ಈ ಬೆಳವಣಿಗೆಯು ಕತರ್ ಮತ್ತು ಇತರ ನಾಲ್ಕು ಅರಬ್ ದೇಶಗಳ ನಡುವಿನ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್‌ಗಳು ಕಳೆದ ವರ್ಷದ ಜೂನ್‌ನಲ್ಲಿ ಕತರ್ ವಿರುದ್ಧ ಆರ್ಥಿಕ ಮತ್ತು ರಾಜತಾಂತ್ರಿಕ ದಿಗ್ಬಂಧನೆಗಳನ್ನು ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.

ಯುಎಇಯ ಸೇನಾ ವಿಮಾನವೊಂದು ತನ್ನ ಅಂತಾರಾಷ್ಟ್ರೀಯ ವಾಯುಪ್ರದೇಶವನ್ನು ಉಲ್ಲಂಘಿಸುತ್ತಿರುವ ಬಗ್ಗೆ ಕತರ್ ವಿಶ್ವಸಂಸ್ಥೆಗೆ ಎರಡು ದೂರುಗಳನ್ನು ನೀಡಿರುವುದನ್ನು ಸ್ಮರಿಸಬಹುದಾಗಿದೆ.

‘‘ಮನಾಮಕ್ಕೆ ಮಾಮೂಲಿ ಮಾರ್ಗದಲ್ಲಿ ಹೋಗುತ್ತಿದ್ದ ತನ್ನ ವಿಮಾನವೊಂದನ್ನು ಕತರ್ ಯುದ್ಧ ವಿಮಾನಗಳು ಅಡ್ಡಗಟ್ಟಿವೆ ಎಂಬುದಾಗಿ ಯುಎಇಯ ಸರಕಾರಿ ವಿಮಾನಯಾನ ಸಂಸ್ಥೆಯೊಂದು ನೀಡಿದ ಸಂದೇಶ ದೇಶದ ನಾಗರಿಕ ವಾಯುಯಾನ ಪ್ರಾಧಿಕಾರಕ್ಕೆ ತಲುಪಿದೆ’’ ಎಂದು ಯುಎಇಯ ಸರಕಾರಿ ಒಡೆತನದ ಡಬ್ಲುಎಎಂ ಸುದ್ದಿ ಸಂಸ್ಥೆ ಇಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News