ಸೌದಿ: ಮಕ್ಕಳ ಚಿತ್ರಗಳ ಪ್ರದರ್ಶನ ಆರಂಭ

Update: 2018-01-15 17:15 GMT

ಜಿದ್ದಾ (ಸೌದಿ ಅರೇಬಿಯ), ಜ. 15: ಸಿನೆಮಾದ ಮೇಲಿದ್ದ 35 ವರ್ಷಗಳ ನಿಷೇಧವನ್ನು ತೆರವುಗೊಳಿಸಿದ ಬಳಿಕ, ಸೌದಿ ಅರೇಬಿಯದಲ್ಲಿ ಕಳೆದ ವಾರಾಂತ್ಯದಲ್ಲಿ ತಾತ್ಕಾಲಿಕ ಸಿನೆಮಾ ಮಂದಿರಗಳಲ್ಲಿ ಮಕ್ಕಳ ಆ್ಯನಿಮೇಟಡ್ ಚಿತ್ರಗಳ ಪ್ರದರ್ಶನವನ್ನು ಆರಂಭಿಸಲಾಗಿದೆ.

ಮೊದಲ ಖಾಯಂ ಸಿನೆಮಾ ಮಂದಿರಗಳು ಮಾರ್ಚ್‌ನಲ್ಲಿ ಆರಂಭಗೊಳ್ಳುವುದೆಂದು ನಿರೀಕ್ಷಿಸಲಾಗಿದೆ.

ಪ್ರಸ್ತುತ ಜಿದ್ದಾದಲ್ಲಿರುವ ಸರಕಾರಿ ಒಡೆತನದ ಸಾಂಸ್ಕೃತಿಕ ಹಾಲ್‌ಗಳಲ್ಲಿ ತಾತ್ಕಾಲಿಕ ಸಿನೇಮಾ ಮಂದಿರಗಳನ್ನು ಆರಂಭಿಸಲಾಗಿದೆ. ಇಲ್ಲಿ ಒಂದು ಪ್ರಾಜೆಕ್ಟರ್, ಒಂದು ಕೆಂಪು ಹಾಸು ಮತ್ತು ಪಾಪ್‌ಕಾರ್ನ್ ಯಂತ್ರಗಳನ್ನು ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News