ಕತರ್‌ ವಿರುದ್ಧ ವಾಯುಯಾನ ಸಂಸ್ಥೆಗೆ ದೂರು: ಯುಎಇ

Update: 2018-01-16 18:06 GMT

ದುಬೈ, ಜ. 16: ತನ್ನ ಪ್ರಯಾಣಿಕ ವಿಮಾನವೊಂದರ ಸಮೀಪಕ್ಕೆ ಕತರ್‌ನ ಯುದ್ಧ ವಿಮಾನಗಳು ಬಂದಿರುವ ಬಗ್ಗೆ ಯುಎಇಯು ಅಂತಾರಾಷ್ಟ್ರೀಯ ನಾಗರಿಕ ವಾಯುಯಾನ ಸಂಘಟನೆಗೆ ದೂರು ಸಲ್ಲಿಸಲಿದೆ ಎಂದು ಆ ದೇಶದ ನಾಗರಿಕ ವಾಯುಯಾನ ಇಲಾಖೆಯ ಮುಖ್ಯಸ್ಥ ಮಂಗಳವಾರ ತಿಳಿಸಿದರು.

‘‘ಎರಡು ಗಂಭೀರ ಘಟನೆಗಳಿಗೆ ಸಂಬಂಧಿಸಿ ನಾವು ಅಂತಾರಾಷ್ಟ್ರೀಯ ನಾಗರಿಕ ವಾಯುಯಾನ ಸಂಘಟನೆಗೆ ಪುರಾವೆಗಳ ಸಮೇತ ನಾವು ದೂರು ಸಲ್ಲಿಸುತ್ತೇವೆ’’ ಎಂದು ನಾಗರಿಕ ವಾಯು ಯಾನ ಮಹಾ ಪ್ರಾಧಿಕಾರದ ಮುಖ್ಯಸ್ಥ ಸೈಫ್ ಅಲ್ ಸುವೈದಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಬಹರೈನ್‌ಗೆ ಹೊರಟಿದ್ದ 2 ಪ್ರಯಾಣಿಕಗಳನ್ನು ಕತರ್‌ನ ಯುದ್ಧ ವಿಮಾನಗಳು ಅಡ್ಡಗಟ್ಟಿವೆ ಎಂದು ಯುಎಇ ಸೋಮವಾರ ಆರೋಪಿಸಿದೆ.

ಆದಾಗ್ಯೂ, ಈ ಆರೋಪಗಳನ್ನು ಕತರ್ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News