ಅಜ್ಮಾನ್: ಬಿಸಿಎಫ್ ಗ್ರಾಂಡ್ ಸ್ಪೋರ್ಟ್ಸ್ ಫೆಸ್ಟಿವಲ್-2018

Update: 2018-01-17 17:36 GMT

ದುಬೈ, ಜ.17: ಅನಿವಾಸಿ ಕನ್ನಡಿಗ ಬ್ಯಾರೀ ಸಮುದಾಯದ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆ ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ ನಡೆಯುವ ವಾರ್ಷಿಕ ಕ್ರೀಡಾ ಕೂಟ ಬಿಸಿಎಫ್ ಗ್ರಾಂಡ್ ಸ್ಪೋರ್ಟ್ಸ್ ಫೆಸ್ಟಿವಲ್-2018ಕ್ಕೆ ಅಜ್ಮಾನ್ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.

ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮುಹಮ್ಮದ್ ಕ್ರೀಡಾಕೂಟದ ನೇತೃತ್ವ ವಹಿಸಿದ್ದರು. ಬಿಸಿಎಫ್ ಉಪಾಧ್ಯಕ್ಷರಾದ ಎಂ.ಇ.ಮೂಳೂರು, ಅಬ್ದುಲ್ ಲತೀಫ್ ಮುಲ್ಕಿ, ಕ್ರೀಡಾ ಸಮಿತಿಯ ಚಯರ್‌ಮ್ಯಾನ್ ಅಫೀಕ್ ಹುಸೈನ್ ಹಾಗೂ ಬಿಸಿಎಫ್ ಪದಾಧಿಕಾರಿಗಳು ಮತ್ತು ಹಿತೈಷಿಗಳು ಭಾಗವಹಿಸಿದ್ದರು.

ನಿರಂತರವಾಗಿ ಸುಮಾರು 25ರಿಂದ 30 ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಮಹಿಳೆಯರು ಮತ್ತು ಮಕ್ಕಳು ಸಹಿತ ನೂರಾರು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

ಕ್ರೀಡಾಕೂಟದಲ್ಲಿ ವಾಲೀಬಾಲ್, ಫುಟ್‌ಬಾಲ್, ಕ್ರಿಕೆಟ್, ಖೋಖೋ, ಟೆನಿಸ್, ಬಿಲಿಯರ್ಡ್ಸ್, ರನ್ನಿಂಗ್ ರೇಸ್, ರಿಲೇ, ಕಬಡ್ಡಿ, ಟಗ್ ಆಫ್ ವಾರ್, ಮಹಿಳೆಯರು ಮತ್ತು ಮಕ್ಕಳಿಗಾಗಿ ಪಾಕ, ಮೆಹಂದಿ ಡಿಸೈನ್ ಹಾಗೂ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಕ್ರೀಡಾಕೂಟದ ಸಮಾರೋಪ ಸಮಾರಂಭ ಫೆಬ್ರವರಿ 2ರಂದು ನಡೆಯಲಿದ್ದು ಸಾವಿರಾರು ಮಂದಿ ಭಾಗವಹಿಸುವ ನಿರೀ್ಷೆ ಇದೆ ಎಂದು ಕ್ರೀಡಾ ಸಮಿತಿ ತಿಳಿಸಿದೆ.

ಸಮಾರೋಪದ ಅಧ್ಯಕ್ಷತೆಯನ್ನು ಬಿಸಿಎಫ್ ಅಧ್ಯಕ್ಷ ಡಾ. ಬಿ.ಕೆ.ಯೂಸುಫ್ ವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ಮಂತ್ರಿಗಳು, ಶಾಸಕರು, ಖ್ಯಾತ ಕ್ರೀಡಾಪಟುಗಳು, ರಾಜಕೀಯ, ಉದ್ದಿಮೆ, ಶಿಕ್ಷಣ, ಆರೋಗ್ಯ ಹೀಗೆ ವಿವಿಧ ಕ್ಷೆೀತ್ರದ ಗಣ್ಯರು ಭಾಗವಹಿಸಲಿದ್ದಾರೆ.

ಬೆಳಗ್ಗೆ 8:30ರಿಂದ ರಾತ್ರಿ 8 ಗಂಟೆಯ ವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಮಧ್ಯಾಹ್ನದ ಊಟ ಹಾಗೂ ಲಘು ಉಪಹಾರ, ಪಾನೀಯವನ್ನೂ ಉಚಿತವಾಗಿ ನೀಡಲಾಗುವುದು. ಪಂದ್ಯಾಟದಲ್ಲಿ ಗೆದ್ದವರಿಗೆ ಸ್ಮರಣಿಕೆಯನ್ನು ಹಾಗೂ ಪ್ರೋತ್ಸಾಹ ಬಹುಮಾನವನ್ನು ನೀಡಿ ಗೌರವಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಸಾಮುದಾಯಿಕ ಐಕ್ಯತೆ, ಆರೋಗ್ಯವನ್ನು ಪ್ರೇರೇಪಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಬೃಹತ್ ಕ್ರೀಡಾಕೂಟದಲ್ಲಿ ಸಕಲ ಅನಿವಾಸಿ ಕನ್ನಡಿಗರು ಭಾಗವಹಿಸುವಂತೆ ಕ್ರೀಡಾ ಸಮಿತಿಯ ಚಯರ್‌ಮ್ಯಾನ್ ಅಫೀಕ್ ಹುಸೈನ್ ಹಾಗೂ ತಂಡದ ಸದಸ್ಯರು ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು, ಪಂದ್ಯಾಟಗಳಲ್ಲಿ ಪಾಲ್ಗೊಳ್ಲಲು ಬಯಸುವವರು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. 0505883943, 0508417475, 0552218351, 0505156284. ಪಾಕ, ಮೆಹಂದಿ ಹಾಗೂ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸುವ ಮಹಿಳೆಯರು, ಮಕ್ಕಳು ಈ ಸಂಖ್ಯೆಯನ್ನು ಸಂಪರ್ಕಿಸುವಂತೆ 0562721152 ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News