ಬಹರೈನ್: 47 ಭಿನ್ನಮತೀಯರ ಬಂಧನ

Update: 2018-01-22 16:36 GMT

ದುಬೈ, ಜ. 22: ರಾಜಕಾರಣಿಗಳ ಹತ್ಯೆಗೆ ಸಂಚು ನಡೆಸಿರುವುದು ಸೇರಿದಂತೆ ಭಯೋತ್ಪಾದನೆ ಆರೋಪಗಳ ಮೇಲೆ 47 ಮಂದಿಯನ್ನು ಬಂಧಿಸಲಾಗಿದೆ ಹಾಗೂ 290 ಮಂದಿ ವಿರುದ್ಧ ಆರೋಪ ಪಟ್ಟಿ ದಾಖಲಿಸಲಾಗಿದೆ ಎಂದು ಬಹರೈನ್ ಪೊಲೀಸರು ರವಿವಾರ ಹೇಳಿದ್ದಾರೆ.

2011ರ ಬೃಹತ್ ಪ್ರತಿಭಟನೆಗಳ ಬಳಿಕ ಭಿನ್ನಮತೀಯರ ವಿರುದ್ಧ ಬಹರೈನ್ ಅಧಿಕಾರಿಗಳು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸುನ್ನಿ ಬಾಹುಳ್ಯದ ಬಹರೈನ್‌ನಲ್ಲಿ ಓರ್ವ ಚುನಾಯಿತ ಪ್ರಧಾನಿ ಹಾಗು ಸಾಂವಿಧಾನಿಕ ದೊರೆ ಇರಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು 7 ವರ್ಷಗಳ ಹಿಂದೆ ಬೃಹತ್ ಪ್ರತಿಭಟನೆ ನಡೆದಿತ್ತು.

ಪುಟ್ಟ ದ್ವೀಪ ರಾಷ್ಟ್ರ ಬಹರೈನ್‌ನಲ್ಲಿ ಶಿಯಾ ಬಾಹುಳ್ಯದ ಇರಾನ್ ‘ಭಯೋತ್ಪಾದಕ ಸೆಲ್’ಗಳಿಗೆ ತರಬೇತಿ ನೀಡುತ್ತಿದೆ ಎಂದು ಬಹರೈನ್ ಆರೋಪಿಸಿದೆ.

ಕಾನೂನು ಅನುಷ್ಠಾನ ಸಂಸ್ಥೆಗಳು 47 ಭಯೋತ್ಪಾದಕರನ್ನು ಬಂಧಿಸುವ ಮೂಲಕ ದೇಶಾದ್ಯಂತ ಭಯೋತ್ಪಾದಕ ದಾಳಿ ನಡೆಸುವ ಸಂಚನ್ನು ವಿಫಲಗೊಳಿಸಿವೆ ಎಂದು ರವಿವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಬಹರೈನ್ ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News