ಸೌದಿ: 9 ಉಪ್ಪುನೀರು ಶುದ್ಧೀಕರಣ ಸ್ಥಾವರ ನಿರ್ಮಾಣ

Update: 2018-01-22 16:55 GMT

 ರಿಯಾದ್ (ಸೌದಿ ಅರೇಬಿಯ), ಜ. 22: ಸೌದಿ ಅರೇಬಿಯವು ಕೆಂಪು ಸಮುದ್ರ ತೀರದಲ್ಲಿ 2 ಬಿಲಿಯ ರಿಯಾಲ್ (ಸುಮಾರು 3,400 ಕೋಟಿ ರೂಪಾಯಿ) ವೆಚ್ಚದಲ್ಲಿ 9 ಉಪ್ಪುನೀರು ಶುದ್ಧೀಕರಣ ಸ್ಥಾವರಗಳನ್ನು ನಿರ್ಮಿಸಲು ಉದ್ದೇಶಿಸಿದೆ ಎಂದು ಪರಿಸರ ಸಚಿವ ಅಬ್ದುಲ್‌ರಹಮಾನ್ ಅಲ್-ಫಾದ್ಲಿ ರವಿವಾರ ಹೇಳಿದ್ದಾರೆ.

ಸ್ಥಾವರಗಳು ಪ್ರತಿ ದಿನ 2,40,000 ಕ್ಯೂಬಿಕ್ ಮೀಟರ್ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

18 ತಿಂಗಳುಗಳಲ್ಲಿ ಕಡಿಮೆ ಅವಧಿಯಲ್ಲಿ ಸ್ಥಾವರಗಳ ನಿರ್ಮಾಣವನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News