ಸೌದಿ ಪ್ರವಾಸಿ ವೀಸಾ ವಿವರಗಳು ಇನ್ನು 2 ತಿಂಗಳಲ್ಲಿ

Update: 2018-01-23 17:37 GMT

ಜಿದ್ದಾ, ಜ. 23: ಸೌದಿ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಪರಂಪರೆ ನಿಗಮ (ಎಸ್‌ಸಿಟಿಎಚ್)ವು ಪ್ರವಾಸಿ ವೀಸಾಗಳ ಕುರಿತ ವಿವರಗಳನ್ನು ಹಾಲಿ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ ಕೊನೆಯಲ್ಲಿ ನೀಡುವುದು ಎಂದು ಸೌದಿ ಪ್ರೆಸ್ ಏಜನ್ಸಿ (ಎಸ್‌ಪಿಎ) ವರದಿ ಮಾಡಿದೆ.

 ಮಾಧ್ಯಮ ವರದಿಗಳಲ್ಲಿ ಪ್ರಕಟಗೊಂಡಿರುವ ವಿವರಗಳು, ಅಗತ್ಯಗಳು ಮತ್ತು ರಾಷ್ಟ್ರೀಯತೆ ವಿವರಗಳಲ್ಲಿ ತಪ್ಪಿದೆ ಹಾಗೂ ಆಯೋಗದ ನಿರ್ದೇಶಕರ ಮಂಡಳಿಯ ಅಂಗೀಕಾರ ಪಡೆದ ಬಳಿಕ ವಿವರಗಳನ್ನು ಒದಗಿಸಲಾಗುವುದು ಎಂದಿದೆ.

ಆಂತರಿಕ ಮತ್ತು ವಿದೇಶ ವ್ಯವಹಾರಗಳ ಸಚಿವಾಲಯಗಳೊಂದಿಗೆ ಸಂಪೂರ್ಣ ಸಮನ್ವಯತೆಯೊಂದಿಗೆ ಪ್ರವಾಸಿ ವೀಸಾ ಬಿಡುಗಡೆಯ ಸಿದ್ಧತೆಗಳನ್ನು ಮುಂದುವರಿಸಲಾಗುವುದು ಎಂದು ಆಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News