ಸೌದಿ: ಮಹಿಳಾ ಪ್ರಾಸಿಕ್ಯೂಟರ್‌ಗಳ ನೇಮಕ

Update: 2018-01-26 16:51 GMT

ರಿಯಾದ್, ಜ. 26: ಸೌದಿ ಅರೇಬಿಯದಲ್ಲಿ ಪುರುಷ ಪ್ರಾಸಿಕ್ಯೂಟರ್‌ಗಳಿಗೆ ಸಮಾನವಾಗಿ ಮಹಿಳಾ ಪ್ರಾಸಿಕ್ಯೂಟರ್‌ಗಳನ್ನು ನೇಮಿಸಿಕೊಳ್ಳಲಾಗುವುದು ಎಂದು ಸೌದಿ ಅರೇಬಿಯದ ಅಟಾರ್ನಿ ಜನರಲ್ ಶೇಖ್ ಸೌದ್ ಅಲ್-ಮುಜೀಬ್ ಹೇಳಿದ್ದಾರೆ.

ಮಹಿಳೆಯರ ಖಾಸಗಿತನವನ್ನು ರಕ್ಷಿಸಬೇಕಾದ ಅಗತ್ಯವಿರುವ ಪ್ರಕರಣಗಳಲ್ಲಿ ಮಹಿಳಾ ತನಿಖಾಧಿಕಾರಿಗಳನ್ನು ಬಳಸಲಾಗುವುದು ಎಂದವರು ಹೇಳಿದರು.

 2030ರ ಮುನ್ನೋಟದಂತೆ, ಮಹಿಳೆಯರು ವಹಿಸಬೇಕಾಗುವ ಪಾತ್ರಕ್ಕೆ ಪೂರಕವಾಗಿ ಈ ನೇಮಕಾತಿಗಳನ್ನು ನಡೆಸಲಾಗುತ್ತಿದೆ ಎಂದು ಅಟಾರ್ನಿ ಜನರಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News